ವಿದೇಶಿ ಹೂಡಿಕೆದಾರರಿಂದ ಏಪ್ರಿಲ್‌ನಲ್ಲಿ ಭಾರತೀಯ ಬಂಡವಾಳ ಮಾರುಕಟ್ಟೆಗೆ ೧೧ ಸಾವಿರ ಕೋಟಿ ರೂಪಾಯಿ ಹೂಡಿಕೆ

ವಿದೇಶಿ ಹೂಡಿಕೆದಾರರು ಏಪ್ರಿಲ್‌ನಲ್ಲಿ ೧೧ ಸಾವಿರದ ೦೯೬ ಕೋಟಿ ರೂ.ಮೊತ್ತವನ್ನು ಭಾರತೀಯ ಬಂಡವಾಳ ಮಾರುಕಟ್ಟೆಗೆ ಹೂಡಿಕೆ ಮಾಡಿದ್ದು, ಇದು ಜಾಗತಿಕ ಮತ್ತು ದೇಶೀಯ ಅಂಶಗಳ ಮೇಲೆ ಪ್ರಭಾವ ಬೀರಿದೆ.

ವಿದೇಶಿ ಬಂಡವಾಳ ಹೂಡಿಕೆದಾರರು ಎರಡು ತಿಂಗಳಲ್ಲಿ ನಿವ್ವಳ ಖರೀದಿದಾರರಾಗಿದ್ದು, ಫೆಬ್ರವರಿಯಲ್ಲಿ ೧೧ ಸಾವಿರದ ೧೮೨ ಕೋಟಿ ರೂಪಾಯಿ ಮತ್ತು ಮಾರ್ಚ್‌ನಲ್ಲಿ ೪೫ ಸಾವಿರದ ೯೮೧ ಕೋಟಿ ರೂ. ಹಣವನ್ನು ಹೂಡಿಕೆ ಮಾಡಿದ್ದಾರೆ.

ಠೇವಣಿದಾರರ ಅಂಕಿಅಂಶಗಳ ಪ್ರಕಾರ, ಎಫ್‌ಪಿಐಗಳು, ಷೇರುಗಳಲ್ಲಿ ೧೩ ಸಾವಿರದ ೩೦೮.೭೮ ಕೋಟಿ ರೂ. ಮತ್ತು ಸಾಲ ವಿಭಾಗದಿಂದ ಏಪ್ರಿಲ್ ೧-೧೨ರ ಅವಧಿಯಲ್ಲಿ ೨ ಸಾವಿರದ ೨೧೨.೦೮ ಕೋಟಿ ರೂ. ಹಿಂದಕ್ಕೆ ಪಡೆದಿದ್ದು, ಒಟ್ಟು ೧೧ ಸಾವಿರದ ೦೯೬.೭೦ ಕೋಟಿ ರೂ. ಹೂಡಿಕೆ ಮಾಡಲಾಗಿದೆ.

ಚುನಾವಣಾ ಪೂರ್ವದಲ್ಲಿ ಸ್ಥಿರ ಸರ್ಕಾರದ ವಿಶ್ವಾಸದ ಹಿನ್ನೆಲೆಯಲ್ಲಿ ಫೆಬ್ರವರಿಯಿಂದ ಈ ಬೆಳವಣಿಗೆ ನಡೆದಿದೆ ಎಂದು ತಜ್ಞರು ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ವಿಶ್ವದ ಆರ್ಥಿಕ  ಕುಸಿತದ ಭೀತಿಯು ಭಾರತೀಯ ಮಾರುಕಟ್ಟೆಯಲ್ಲಿ ವಿದೇಶಿ ಹಣದ ನಿರೀಕ್ಷೆಯನ್ನು ಹೆಚ್ಚಿಸಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.