ಐಪಿಎಲ್ ಕ್ರಿಕೆಟ್ – ಇಂದು ರಾಯಲ್ ಚಾಲೆಂಜರ‍್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಹಣಾಹಣಿ.

ಹೈದರಾಬಾದ್‌ನಲ್ಲಿ ನಿನ್ನೆ ರಾತ್ರಿ ನಡೆದ ಐಪಿಎಲ್ ಟ್ವೆಂಟಿ ೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸನ್‌ರೈಸರ‍್ಸ್ ಹೈದರಾಬಾದ್ ವಿರುದ್ಧ  ೩೯ ಭರ್ಜರಿ ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ೭ ವಿಕೆಟ್ ನಷ್ಟಕ್ಕೆ ೧೫೫ ರನ್ ಗಳಿಸಿತು.  ತಂಡದ ಪರವಾಗಿ ನಾಯಕ ಶ್ರೇಯಸ್ ಅಯ್ಯರ್ ೪೫ ಮತ್ತು ಕಾಲಿನ್ ಮನ್ರೋ ೪೦ ರನ್ ಬಾರಿಸಿದರು.  ಇದಕ್ಕೆ ಪ್ರತಿಯಾಗಿ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ ೧೮.೫ ಓವರ್ ಗಳಲ್ಲಿ ೧೧೬ ರನ್ ಗಳಿಗೆ ಆಲೌಟ್ ಆಯಿತು. ಕಗಿಸೊ ರಬಾಡಾ ೪ ವಿಕೆಟ್ ಪಡೆದು ೩.೫ ಓವರ್‌ಗಳಲ್ಲಿ ೨೨ ರನ್‌ಗಳಿಸಿದರು. ಒಟ್ಟು ೮ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ೭ ಪಂದ್ಯಗಳನ್ನು ಗೆಲುವು ಗೆದ್ದುಕೊಂಡಿದೆ.  ಡೆಲ್ಲಿ ಕ್ಯಾಪಿಟಲ್ಸ್  ಪಟ್ಟಿಯಲ್ಲಿ ೨ನೇ ಸ್ಥಾನದಲ್ಲಿದೆ.