ಮಹಾರಾಷ್ಟ್ರದ ನಕ್ಸಲ್ ಪೀಡಿತ ಗಡ್‌ಚಿರೋಲಿ ಮತ್ತು ಚಿಮೂರ್ ಲೋಕಸಭಾ ಕ್ಷೇತ್ರದ ನಾಲ್ಕು ಮತಗಟ್ಟೆಗಳಲ್ಲಿ ಮರು ಮತದಾನ ಪ್ರಗತಿಯಲ್ಲಿ.

ಮಹಾರಾಷ್ಟ್ರದಲ್ಲಿ ನಕ್ಸಲ್ ಪೀಡಿತ ಗಡ್‌ಚಿರೋಲಿ-ಚಿಮೂರ್ ಲೋಕಸಭಾ ಕ್ಷೇತ್ರದ ವಟಲಿ, ಗರೆಡೇವಾಡಾ, ಗರೆಡೇವಾಡಾ (ಪುಸೊಸೊಟಿ) ಮತ್ತು ಗರೆಡೇವಾಡಾ (ವಂಗೆಟೂರಿ) ಮತಗಟ್ಟೆಗಳಲ್ಲಿ ಇಂದು ಮರು ಚುನಾವಣೆ ನಡೆಯುತ್ತಿದೆ.  ಇಂದು ಬೆಳಗ್ಗೆ ೭ ಗಂಟೆಗೆ ಮತದಾನ ಆರಂಭಗೊಂಡಿದ್ದು, ಅಪರಾಹ್ನ ೩ ಗಂಟೆಯವರೆಗೆ ನಡೆಯಲಿದೆ. ಮಹಾರಾಷ್ಟ್ರದ ೭ ಲೋಕಸಭಾ ಕ್ಷೇತ್ರಗಳಲ್ಲಿ ಕಳೆದ ೧೧ ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಗಡ್‌ಚಿರೋಲಿ-ಚಿಮೂರ್ ಕ್ಷೇತ್ರ ಸಹ ಒಂದಾಗಿತ್ತು. ನಕ್ಸ್‌ಲ್ ದಾಳಿಯ ಬೆದರಿಕೆ ಹಿನ್ನೆಲೆಯಲ್ಲಿ ಚುನಾವಣೆ ಸಿಬ್ಬಂದಿ ಮತಗಟ್ಟೆಗಳಿಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದ ಕಾರಣ ಸರಿಯಾಗಿ ಮತದಾನ ನಡೆಯದಿದ್ದರಿಂದ ಇಲ್ಲಿ ಮರು ಮತದಾನಕ್ಕೆ ರಾಜ್ಯ ಚುನಾವಣಾ ಆಯೋಗ ಆದೇಶ ನೀಡಿತು.