ಹಾಗೂ ಐಪಿಎಲ್ ಟ್ವೆಂಟಿ ೨೦ ಕ್ರಿಕೆಟ್; ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸನ್‌ರೈಸರ್ಸ್ು ಹೈದರಾಬಾದ್ ವಿರುದ್ಧ ೩೯ ರನ್‌ಗಳ ಜಯ

ಹೈದರಾಬಾದ್‌ನಲ್ಲಿ ನಿನ್ನೆ ನಡೆದ ಐಪಿಎಲ್ ಟ್ವೆಂಟಿ ೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಸನ್‌ರೈಸರ‍್ಸ್ ಹೈದರಾಬಾದ್ ವಿರುದ್ಧ  ೩೯ ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ೭ ವಿಕೆಟ್ ನಷ್ಟಕ್ಕೆ ೧೫೫ ರನ್ ಗಳಿಸಿತು.  ತಂಡದ ಪರ ಶ್ರೇಯಸ್ ಅಯ್ಯರ್ ೪೫ ಮತ್ತು ಕಾಲಿನ್ ಮನ್ರೋ ೪೦ ರನ್ ಬಾರಿಸಿದರು.  ಇದಕ್ಕೆ ಪ್ರತಿಯಾಗಿ ಗುರಿ ಬೆನ್ನತ್ತಿದ ಹೈದರಾಬಾದ್ ತಂಡ ೧೮.೫ ಓವರ್ ಗಳಲ್ಲಿ ೧೧೬ ರನ್ ಗಳಿಗೆ ಆಲೌಟ್ ಆಯಿತು.  ಇದಕ್ಕೂ  ಮೊದಲು ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೊಲ್ಕತ್ತಾ ನೈಟ್ ರೈಡರ‍್ಸ್ ವಿರುದ್ಧ ೫ ವಿಕೆಟ್‌ಗಳ  ಜಯ ಸಾಧಿಸಿ, ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.  ಒಟ್ಟು ೮ ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ೭ ಗೆಲುವು ಸಾಧಿಸಿದೆ.  ಡೆಲ್ಲಿ ಕ್ಯಾಪಿಟಲ್ಸ್  ಪಟ್ಟಿಯಲ್ಲಿ ೨ನೇ ಸ್ಥಾನದಲ್ಲಿದೆ. ಮುಂಬೈ ನಲ್ಲಿಂದು ರಾತ್ರಿ ೮ ಗಂಟೆಗೆ ನಡೆಯಲಿರುವ  ಪಂದ್ಯದಲ್ಲಿ  ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ‍್ಸ್  ಬೆಂಗಳೂರು ಸೆಣಸಲಿವೆ.