ಫಿನ್‌ಲೆಂಡ್ ಸಾರ್ವತ್ರಿಕ ಚುನಾವಣೆ; ಲೆಫ್ಟಿಸ್ಟ್ ಸೋಷಿಯಲ್ ಡೆಮಾಕ್ರಟಿಕ್ ಪಕ್ಷಕ್ಕೆ ಅಲ್ಪ ಮುನ್ನಡೆ

ಫಿನ್‌ಲೆಂಡ್‌ನಲ್ಲಿ ನಿನ್ನೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಲೆಫ್ಟಿಸ್ಟ್ ಸೋಷಿಯಲ್ ಡೆಮಾಕ್ರಟಿಕ್ ಪಕ್ಷ ಅಲ್ಪ ಮುನ್ನಡೆಯಿಂದ ಜಯ ಸಾಧಿಸಿದೆ.  ಶೇಕಡ ೧೦೦ರಷ್ಟು  ಮತಪತ್ರ ಎಣಿಕೆ ಪೂರ್ಣಗೊಂಡಿದ್ದು, ಫಿನ್‌ಲೆಂಡ್ ಸಂಸತ್‌ನ ಒಟ್ಟು ೨೦೦ ಸ್ಥಾನಗಳ ಪೈಕಿ ಸೋಷಿಯಲ್ ಡೆಮಾಕ್ರೆಟ್ ಪಕ್ಷ ೪೦ ಸ್ಥಾನಗಳಲ್ಲಿ ಜಯ ಸಾಧಿಸಿದೆ. ಫಿನ್ಸ್‌ಪಾರ್ಟಿ ೩೯, ನ್ಯಾಷನಲ್ ಕೋ ಅಲಿಷನ್ ಪಾರ್ಟಿ ೩೮ ಹಾಗೂ ಆಡಳಿತಾರೂಢ ಸೆಂಟರ್ ಪಾರ್ಟಿ ೩೧ ಸ್ಥಾನಗಳಲ್ಲಿ ಜಯಗಳಿಸಿವೆ. ನಿರ್ಗಮಿತ ಪ್ರಧಾನಮಂತ್ರಿ  ಜುಹಾ ಸಿಪಿಲಾ, ದೇಶದ ಆರ್ಥಿಕತೆಯ  ಪುನರ್ ನಿರ್ಮಾಣ ದೃಷ್ಟಿಯಿಂದ  ತಮ್ಮ ಸರ್ಕಾರ ಕೈಗೊಂಡ ಕಠಿಣ ಸುಧಾರಣಾ ಕ್ರಮಗಳಿಂದ ಚುನಾವಣೆಯಲ್ಲಿ ಹಿನ್ನಡೆಯಾಯಿತು ಎಂದು ವಿಶ್ಲೇಷಿಸಿದ್ದಾರೆ. ಅಲ್ಪ ಮುನ್ನಡೆ ಸಾಧಿಸಿರುವ ಸೋಷಿಯಲ್ ಡೆಮಾಕ್ರೆಟಿಕ್ ಪಕ್ಷ ೧೬ ವರ್ಷಗಳ ನಂತರ ಫಿನ್‌ಲೆಂಡ್‌ನಲ್ಲಿ ಸರ್ಕಾರ ರಚಿಸುತ್ತಿದೆ.