ಲೂಧಿಯಾನದಲ್ಲಿ ಇಂದು ನಡೆಯಲಿರುವ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಮತ್ತು ಸರ್ವೀಸಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಸೆಮಿಫೈನಲ್ಸ್ ಪಂದ್ಯಗಳಲ್ಲಿ ೮ ಬಾರಿಯ ಚಾಂಪಿಯನ್ ಪಂಜಾಬ್ ೨-೧ ಗೋಲುಗಳಿಂದ ಐದು ೫ಬಾರಿಯ ಚಾಂಪಿಯನ್ ಗೋವಾ ವಿರುದ್ಧ ಜಯಗಳಿಸಿದ್ದು, ಹಾಗೂ ಸರ್ವೀಸಸ್ ತಂಡ ಫೆನಾಲ್ಟಿ ಶೂಟೌಟ್ ಅವಕಾಶದಲ್ಲಿ ಕರ್ನಾಟಕ ತಂಡವನ್ನು ೪-೩ ಗೋಲುಗಳಿಂದ ಮಣಿಸಿ ಫೈನಲ್ ಅರ್ಹತೆ ಪಡೆದುಕೊಂಡಿದೆ. ಆಕಾಶವಾಣಿಯಲ್ಲಿ ಅಪರಾಹ್ನ ೩ ಗಂಟೆ ೨೫ ನಿಮಿಷದಿಂದ ಫೈನಲ್ ಪಂದ್ಯದ ವೀಕ್ಷಕ ವಿವರಣೆಯನ್ನು ನೇರ ಪ್ರಸಾರ ಮಾಡಲಾಗುತ್ತದೆ. ಎಫ್ಎಂ ರೇನ್ ಬೋ ನೆಟ್ವರ್ಕ್ ಮತ್ತು ನ್ಯಾಷನಲ್ ಹೂಕ್-ಅಪ್ನಲ್ಲಿ ವೀಕ್ಷಕ ವಿವರಣೆ ಕೇಳಬಹುದಾಗಿದೆ.