ಇಂಡಿಯನ್ ಪ್ರಿಮಿಯರ್ ಲೀಗ್ ಟಿ-೨೦ ಪಂದ್ಯಾವಳಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ೬ ವಿಕೆಟ್ ಜಯ, ಇಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ‍್ಸ್ ಹೈದರಾಬಾದ್ ಮುಖಾಮುಖಿ

ಇಂಡಿಯನ್ ಪ್ರಿಮಿಯರ್ ಲೀಗ್ ಟಿ-೨೦ ಪಂದ್ಯಾವಳಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ೬ ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ೧೯೧ ರನ್ ಪೇರಿಸಿತ್ತು. ೧೯೨ ರನ್ ಗುರಿ ಬೆನ್ನಟ್ಟಿದ ಡೆಲ್ಲಿ ೪ ಎಸೆತ ಬಾಕಿ ಇರುವಂತೆ ಜಯದ ಗುರಿ ತಲುಪಿತು.
ರಿಷಬ್ ಪಂತ್ ೩೬ ಎಸೆತದಲ್ಲಿ ೭೮ ರನ್ ಸಿಡಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರಂಭಿಕ ಆಟಗಾರ ಶಿಖರ್ ಧವನ್ ರಭಸದ ಅರ್ಧಶತಕ ದಾಖಲಿಸಿ ೫೨ ರನ್ ಗಳಿಸಿದರು. ಪೃಥ್ವಿ ಶಾ ೪೨ ರನ್ ಪೇರಿಸಿದರು.
ಇದಕ್ಕೂ ಮೊದಲು ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ ೨೦ ಓವರುಗಳಲ್ಲಿ ೧೯೧ ರನ್ ಗಳಿಸಿತು.
ರಾಜಸ್ಥಾನ ಪರ ಅಜಿಂಕ್ಯ ರಹಾನೆ ೧೦೫ ರನ್ ಗಳಿಸಿದರು. ನಾಯಕ ಸ್ಟೀವ್ ಸ್ಮಿತ್ ೫೦ ಮತ್ತು ಸ್ಟುವರ್ಟ್ ಬಿನ್ನಿ ೧೯ ರನ್ ಗಳಿಸಿದರು.
ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಇಂದು ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ‍್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿದೆ. ಪಂದ್ಯ ರಾತ್ರಿ ೮ ಗಂಟೆಗೆ ಆರಂಭವಾಗಲಿದೆ.