ಇರಾನ್ ವಿರುದ್ಧದ ದಿಗ್ಬಂಧನೆಗಳಿಂದ ಚಬಹಾರ್ ಬಂದರು ಯೋಜನೆ ಮೇಲೆ ಪರಿಣಾಮ ಬೀರದು – ಅಮೆರಿಕ

ಇರಾನ್ ಮೇಲೆ ನಿರ್ಬಂಧಗಳನ್ನು ಹೇರಿದ್ದರೂ ಚಬಹಾರ್ ಬಂದರು ಯೋಜನೆಗೆ ಯಾವುದೇ ರೀತಿಯ ತೊಂದರೆ  ಆಗುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.ಭಾರತ ಮತ್ತು ಇರಾನ್ ಜಂಟಿಯಾಗಿ ಚಬಹಾರ್ ಬಂದರು ಯೋಜನೆಯನ್ನು ಆರಂಭಿಸಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲೆ ನಿರ್ಬಂಧ ವಿಧಿಸಿದ್ದರೂ ಯೋಜನೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಅಮೆರಿಕ ವಕ್ತಾರರು ತಿಳಿಸಿದ್ದಾರೆ.ಆಫ್ಘಾನಿಸ್ತಾನದ ಅಭಿವೃದ್ಧಿಗೆ ಪೂರಕವಾಗಿ ಕೈಗೊಂಡಿರುವ ಚಬಹಾರ್ ಯೋಜನೆಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.ಇರಾನ್‌ನೊಂದಿಗೆ ತೈಲ ವಹಿವಾಟು ನಡೆಸುವುದಕ್ಕೆ ಅಮೆರಿಕ ನಿರ್ಬಂಧ ಹೇರಿದೆ.