ಚೀನಾದ ಉಹಾನ್ನಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ನ ಪ್ರೀ ಕ್ವಾರ್ಟ್ರ್ ಫೈನಲ್ಸ್ ಪಂದ್ಯದಲ್ಲಿಂದು ಭಾರತದ ಅಗ್ರ ಆಟಗಾರ್ತಿ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಹಾಗೂ ಸಮೀರ್ ವರ್ಮಾ ಸೆಣಸಲಿದ್ದಾರೆ.
ಮಹಿಳಾ ಸಿಂಗಲ್ಸ್ ಮುಕ್ತ ಸುತ್ತಿನಲ್ಲಿ ಸಿಂಧು ೪ ನೇ ಶ್ರೇಯಾಂಕ ಹೊಂದಿದ್ದು ಜಪಾನ್ನ ಸಯಾಕ ತಕ ಹಶಿ ಅವರುನ್ನು ೨೧-೧೪,೨೧-೭ ಅಂತರದಲ್ಲಿ ಸೋಲಿಸಿದ್ದಾರೆ. ಏಳನೇ ಸ್ಥಾನದಲ್ಲಿರುವ ಸೈನಾ, ಚೀನಾದ ಹನ್ ಯೂಯಿ ವಿರುದ್ಧ ೧೨-೨೧, ೨೧-೧೧, ೨೧-೧೭ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಪುರುಷರ ಸಿಂಗಲ್ಸ್ನಲ್ಲಿ ಸಮೀರ್ ಅವರು ಜಪಾನ್ನ ಕಜುಮಾಸ ಸಕಾಲ್ ಅವರನ್ನು ೨೧-೧೩,೧೭-೨೧,೨೧-೧೮ ಅಂತರದಲ್ಲಿ ಸೋಲಿಸಿದ್ದಾರೆ.