ಲೋಕಸಭಾ ಚುನಾವಣೆಯ ೩ನೇ ಹಂತದಲ್ಲಿ ಶೇಕಡ ೬೬ರಷ್ಟು ಮತದಾನವಾಗಿದೆ. ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ನವದೆಹಲಿಯಲ್ಲಿ ನಿನ್ನೆ ಸಂಜೆ ಸುದ್ದಿಗಾರರಿಗೆ ಈ ಮಾಹಿತಿ ನೀಡಿ, ಕೆಲ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ, ೧೧೬ ಕ್ಷೇತ್ರಗಳು ಹಾಗೂ ಅನಂತನಾಗ್ ಜಿಲ್ಲೆಯ ಅನಂತನಾಗ್ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಶಾಂತಿಯುತವಾಗಿ ನಡೆಯಿತು ಎಂದು ಹೇಳಿದರು. ೫೪೩ ಲೋಕಸಭಾ ಕ್ಷೇತ್ರಗಳ ಪೈಕಿ ೩೦೩ ಕ್ಷೇತ್ರಗಳಲ್ಲಿ ಮತದಾನ ಪೂರ್ಣಗೊಂಡಿದೆ ಎಂದು ಅವರು ಹೇಳಿದರು. ಜನರು ಅಧಿಕ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದರು ಎಂದು ಅವರು ತಿಳಿಸಿದರು. ತ್ರಿಪುರಾದಲ್ಲಿ ಶೇಕಡ ೭೯.೬೪ರಷ್ಟು ಮತದಾನವಾಗಿದ್ದರೆ, ಪಶ್ಚಿಮ ಬಂಗಾಳ ಶೇ. ೭೮.೯೭, ಅಸ್ಸಾಂ – ೭೪.೦೫, ಕೇರಳ -೭೩.೦೬, ದಮನ್ ಮತ್ತು ದಿಯೂ – ೭೩, ದಾದರ್ ಮತ್ತು ನಗರ್ ಹವೇಲಿ – ೭೩.೧೪, ಗೋವಾ – ೭೦,೦೧ ಛತ್ತೀಸ್ಗಡ ೬೪.೦೨, ಕರ್ನಾಟಕ- ೬೦.೪೨, ಗುಜರಾತ್ – ೫೯, ಬಿಹಾರ – ೬೦, ಮಹಾರಾಷ್ಟ್ರ – ೬೨, ಉತ್ತರಪ್ರದೇಶ – ೬೦.೫೨ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡ ೧೨.೮೬ರಷ್ಟು ಮತದಾನವಾಗಿದೆ. ಒಡಿಶಾದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಜೊತೆಜೊತೆಯಲ್ಲೆ ನಡೆದ ಮತದಾನದಲ್ಲಿ ಶೇಕಡ ೬೪ರಷ್ಟು ಮಂದಿ ಮತ ಚಲಾಯಿಸಿದ್ದಾರೆ.