ದೋಹಾದಲ್ಲಿ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್-ಅಂತಿಮ ದಿನದಂದು ಒಂದು ಚಿನ್ನ ಸೇರಿ ನಾಲ್ಕು ಪದಕ ಗಳಿಸಿದ ಭಾರತಕ್ಕೆ ಪದಕ ಪಟ್ಟಿಯಲ್ಲಿ ನಾಲ್ಕನೆ ಸ್ಥಾನ

ಕತಾರ್‌ನ ದೋಹಾದಲ್ಲಿ ನಡೆದ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಕೊನೆಯ ದಿನವಾದ ನಿನ್ನೆ  ಭಾರತ ಒಂದು ಚಿನ್ನ ಸೇರಿದಂತೆ ೪ ಪದಕ ಗೆದ್ದುಕೊಂಡಿದೆ. ಪಿಯು ಚಿತ್ರಾ ಮಹಿಳೆಯರ ೧೫೦೦ ಮೀಟರ್ ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ೨೦೧೭ರಲ್ಲಿ ಗೆದ್ದ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮಧ್ಯೆ ಅಜೇಯ್ ಕುಮಾರ್ ಸಾರೋಜ್ ಪುರುಷರ ೧೫೦೦ ಮೀಟರ್ ಓಟ ಮತ್ತು ಮಹಿಳೆಯರ ೪೦೦ ಮೀಟರ್ ರಿಲೆ ತಂಡ  ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದೆ. ಭಾರತ ಪದಕ ಪಟ್ಟಿಯಲ್ಲಿ ೪ನೇ ಸ್ಥಾನಿಯಾಗಿ  ಅಭಿಯಾನ ಅಂತ್ಯಗೊಳಿಸಿದೆ.