ರಷ್ಯಾದ ವಾಲ್ಡಿವೋಸ್ಟಾಕ್‌ನ ಫೆಸಿಫಿಕ್ ಪೋರ್ಟ್ ನಗರದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ನಡುವೆ ಇಂದು ಮೊಟ್ಟ ಮೊದಲ ಸಭೆ

ವ್ಲಾಡಿವೋಸ್ಟಾಕ್ ಪೆಸಿಫಿಕ್ ಬಂದರು ನಗರದಲ್ಲಿ ಇಂದು ನಡೆಯಲಿರುವ ಮೊದಲ ಶೃಂಗಸಭೆಯಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಕೊರಿಯಾ ಪರ್ಯಾಯ ದೀಪದಲ್ಲಿ ಉಂಟಾಗಿರುವ ಉದ್ರಿಕ್ತ ಪರಿಸ್ಥಿತಿಯನ್ನು ಶಮನಗೊಳಿಸಲು ಹಾಗೂ ಉಭಯ ರಾಷ್ಟ್ರಗಳ ನಡುವಿನ ಆರ್ಥಿಕ ದ್ವಿಪಕ್ಷೀಯ ಸಹಭಾಗಿತ್ವವನ್ನು ಹೆಚ್ಚಿಸಲು ತಾವು ಬಯಸಿರುವುದಾಗಿ ಪುಟಿನ್ ಹೇಳಿದ್ದಾರೆ. ಕೊರಿಯಾ ಪರ್ಯಾಯ ದ್ವೀಪದಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಬಗೆಹರಿಸಲು ಹಾಗೂ ಉಭಯ ರಾಷ್ಟ್ರಗಳ ನಡುವೆ ಹೊಂದಾಣಿಕೆ ಹೆಚ್ಚಳಕ್ಕೆ ಉತ್ತರ ಕೊರಿಯಾ ನಾಯಕ ಕಿಮ್ ಅವರ ರಷ್ಯಾ ಭೇಟಿ  ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ. ವರ್ಷಾರಂಭದಲ್ಲಿ ಹನೋಯಿನಲ್ಲಿ ಪಯೋಂಗ್ಯಾಂಗ್ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮದ ಕುರಿತು  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ಒಪ್ಪಂದ  ವಿಫಲವಾದ ಬಳಿಕ ಅವರು ಬೆಂಬಲ ಕೋರಲಿದ್ದಾರೆ ಎಂಬ ನಂಬಿಕೆಯಲ್ಲಿದ್ದಾರೆ.