ವ್ಲಾಡಿವೊಸ್ಟಾಕ್‌ನ ಪೆಸಿಫಿಕ್ ನಗರದಲ್ಲಿಂದು ಮೊದಲ ಶೃಂಗಸಭೆಯಲ್ಲಿ ಉತ್ತರ ಕೊರಿಯಾ ಮುಖಂಡ ಕಿಮ್ ಜಾಂಗ್ ಉನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ

ವ್ಲಾಡಿವೋಸ್ಟಾಕ್ ಪೆಸಿಫಿಕ್ ಬಂದರು ನಗರದಲ್ಲಿ ಇಂದು ನಡೆಯಲಿರುವ ಮೊದಲ ಶೃಂಗಸಭೆಯಲ್ಲಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ಉಭಯ ನಾಯಕರು ಕೊರಿಯನ್ ಪರ್ಯಾಯ ದ್ವೀಪದ ಪರಮಾಣು ಸಮಸ್ಯೆ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು  ಕ್ರೆಮ್ಲಿನ್ ಹೇಳಿದ್ದಾರೆ. ಕಿಮ್ ಅವರು ತಮ್ಮ ಖಾಸಗಿ ರೈಲಿನ ಮೂಲಕ ನಿನ್ನೆ ರಷ್ಯನ್ ಫಾರ್ ಈಸ್ಟ್ ತಲುಪಿದ್ದಾರೆ.

ವರ್ಷಾರಂಭದಲ್ಲಿ ಹನೋಯಿನಲ್ಲಿ ಪಯೋಂಗ್ಯಾಂಗ್ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮದ ಕುರಿತು  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ಒಪ್ಪಂದ ವಿಫಲವಾದ ಬಳಿಕ ಅವರು ಬೆಂಬಲ ಕೋರಲಿದ್ದಾರೆ ಎಂಬ ನಂಬಿಕೆಯಲ್ಲಿದ್ದಾರೆ.

ಪುಟಿನ್ ವಿದೇಶಿ ನೀತಿ ಸಹಾಯಕ ಯೂರಿ ಉಷಾಕೊವ್ ಪರ್ಯಾಯದ್ವೀಪದ ಪರಿಸ್ಥಿತಿ ಇತ್ತೀಚಿನ ತಿಂಗಳುಗಳಲ್ಲಿ  ಅಲ್ಪಮಟಿಗ್ಪೆ ಸ್ಥಿರವಾಗಿದೆ ಎಂದಿದ್ದಾರೆ.