ಚೈನಾದ ವುಹಾನ್‌ನಲ್ಲಿ ನಡೆದಿರುವ ಬ್ಯಾಡ್ಮಿಂಟನ್ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿಂದು ಪಿ.ವಿ.ಸಿಂಧು, ಸೈನಾನೆಹ್ವಾಲ್ ಮತ್ತು ಸಮೀರ್ ವರ್ಮಾ ಅವರ ಕ್ವಾರ್ಟರ್ ಫೈನಲ್ ಪಂದ್ಯಗಳು

ಚೈನಾದ ವುಹಾನ್‌ನಲ್ಲಿ ನಡೆದಿರುವ ಬ್ಯಾಡ್ಮಿಂಟನ್ ಏಷ್ಯನ್ ಚಾಂಪಿಯನ್ ಶಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಇಂದು ಭಾರತದ ಅಗ್ರ ಆಟಗಾರರಾದ ಪಿ.ವಿ.ಸಿಂಧು, ಸೈನಾನೆಹ್ವಾಲ್ ಮತ್ತು ಸಮೀರ್ ವರ್ಮಾ ಆಡಲಿದ್ದಾರೆ.
ಮಹಿಳೆಯರ ಸಿಂಗಲ್ಸ್‌ನ ೪ನೇ ಶ್ರೇಯಾಂಕದ ಸಿಂಧು, ೧೭ನೇ ಶ್ರೇಯಾಂಕದ ಚೈನಾದ ಯಾನ್‌ಯಾನ್ ಕಾಯ್ ಅವರನ್ನು ಎದುರಿಸುವರು. ಸೈನಾನೆಹ್ವಾಲ್ ಅವರು ವಿಶ್ವದ ೨ನೇ ಶ್ರೇಯಾಂಕಿತೆ ಜಪಾನ್‌ನ ಅಕಾನೆ ಯಮಗುಚಿ ಅವರನ್ನು ಎದುರಿಸುವರು.
ಪುರುಷರ ಸಿಂಗಲ್ಸ್‌ನಲ್ಲಿ ವರ್ಮಾವರು ಚೈನಾದ ೨ನೇ ಶ್ರೇಯಾಂಕಿತ ಯುಕಿಶಿ ಅವರೊಂದಿಗೆ ಸೆಣಸುವರು. ಪಂದ್ಯಗಳು ಇಂದು ಅಪರಾಹ್ನ ೩ ಗಂಟೆಗೆ ನಡೆಯಲಿವೆ.