ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್‌ಐಎ, ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್‌ಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ನಿನ್ನೆ ಬಂಧಿಸಿದೆ.
ಭಯೋತ್ಪಾದಕರಾದ ತನ್ವೀರ್ ಅಲಿಯಾಸ್ ತನ್ವೀರ್ ಅಹಮದ್ ಘನಿ ಹಾಗೂ ಬಿಲಾಲ್ ಮಿರ್ ಅಲಿಯಾಸ್ ಬಿಲಾಲ್ ಅಹಮದ್ ಮಿರ್‌ರನ್ನು ಸಾರ್ವಜನಿಕ ಸುರಕ್ಷತೆ ಕಾಯ್ದೆಯಡಿ ಬಂಧಿಸಲಾಗಿದ್ದು, ಜಮ್ಮುವಿನ ಕೋಟ್ ಬಲ್ವಾಲ್ ಜೈಲಿನಲ್ಲಿ ಇರಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.
ಅವರುಗಳನ್ನು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ೭ ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.
ಜೈಷ್-ಎ-ಮೊಹಮ್ಮದ್ ಹಿರಿಯ ನಾಯಕರು ಇವರೀರ್ವರನ್ನು ಭಾರತದಲ್ಲಿ ನಿಷೇಧಿತ ಉಗ್ರ ಸಂಘಟನೆಗಳಿಗೆ ಶಕ್ತಿ ತುಂಬಲು, ಹೆಚ್ಚು ಹೆಚ್ಚು ಜನರನ್ನು ಸಂಘಟನೆಗಳಿಗೆ ಸೇರಿಸಿಕೊಳ್ಳುಬವ ಪಿತೂರಿಗೆ ಬಳಸಿಕೊಳ್ಳುತ್ತಿದ್ದರು ಎಂದು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.