17ನೇ ಲೋಕಸಭೆ ಚುನಾವಣೆ ಪೂರ್ಣ

ಮತದಾರರ ಅಗಾಧವಾದ ಭಾಗವಹಿಸುವಿಕೆಯ ಮಧ್ಯೆ ಏಳು ಹಂತದ ಲೋಕಸಭೆ (ಭಾರತೀಯ ಸಂಸತ್ತಿನ ಕೆಳಮನೆ) ಚುನಾವಣೆಗೆ ಸಂಬಂಧಿಸಿದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ. 2019 ಲೋಕಸಭೆ ಚುನಾವಣೆಯಲ್ಲಿ ಶೇ. 66ರಷ್ಟು ಮತದಾನ ನಡೆದಿದೆ. ಸುಮಾರು 900 ದಶಲಕ್ಷ ಮತದಾರರು ದೇಶದಲ್ಲಿದ್ದಾರೆ. ಭಾರತ ಮತ್ತೊಮ್ಮೆ ತನ್ನ ಶಕ್ತಿ ಮತ್ತು ನಂಬಿಕೆಯನ್ನು ಭಾಗವಹಿಸುವ ಪ್ರಜಾಪ್ರಭುತ್ವದಲ್ಲಿ ಪ್ರದರ್ಶಿಸಿದೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವು ಮತದಾರರ ದೊಡ್ಡ ಮಟ್ಟದ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಯಿತು. ಹಿರಿಯ ನಾಗರಿಕರಿಗೆ ಮತ್ತು ವಿಕಲ ಚೇತನರ ಪಾಲ್ಗೊಳ್ಳುವಿಕೆಗೆ ಕೇಂದ್ರ ಚುನಾವಣಾ ಆಯೋಗದ (ಇಸಿಐ) ವಿಶೇಷ ವ್ಯವಸ್ಥೆಗಳನ್ನು ಮಾಡಿತ್ತು. ಹೀಗಾಗಿ ಜನರೂ ಆಸಕ್ತಿಯಿಂದ ಚುನಾವಣೆಯಲ್ಲಿ ಪಾಲ್ಗೊಂಡರು. ಮಧ್ಯಪ್ರದೇಶದ ಇಂದೋರ್ ನಲ್ಲಿ ಮೂರು ಅಡಿ ಎತ್ತರದ ವಿನಿತ್ ಜೈನ್ ಎಂಬ ಮಹಿಲೆಯನ್ನು ಅತ್ಯಂತ ಆಸಕ್ತಿಯಿಂದ ಮತದಾನ ಮಾಡಿದಳು. ಮೊದಲಿಗೆ, ಸಬಾ ಮತ್ತು ಫರಾಹ್, ಎಂಬ ಸಯಾಮಿ ಅವಳಿ ಸಹೋದರಿಯರು ತಮ್ಮ ಮತಗಳನ್ನು ಬಿಹಾರದ ಪಾಟ್ನಾದಲ್ಲಿ ದಾಖಲಿಸಿದರು. ವಿದೇಶದಲ್ಲಿ ನೆಲೆಸಿದ್ದ ಭಾರತೀಯರು ಕೂಡ ಲೋಕಸಭೆ ಚುನಾವಣೆಗಳಲ್ಲಿ ಪಾಲ್ಗೊಂಡರು. ಏಕೆಂದರೆ ಮತ ಚಲಾಯಿಸಲೆಂದೇ ದೊಡ್ಡ ಸಂಖ್ಯೆಯಲ್ಲಿ ವಿದೇಶದಿಂದ ವಿಮಾನದಲ್ಲಿ ಬಂದಿದ್ದರು. ವಾಸ್ತವವಾಗಿ ದಿನಗೂಲಿ ಕಾರ್ಮಿಕರು ಸೇರಿದಂತೆ ಅನೇಕ ಜನರು ರಜೆ ಹಾಕಿ ಬಂದು ಮತದಾನದಲ್ಲಿ ಪಾಲ್ಗೊಂಡರು. ಚುನಾವಣಾ ಜಾಗೃತಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನಕ್ಕೆ ದೇಶ ಸಾಕ್ಷಿಯಾಯಿತು. ಮತದಾರರ ಸಜ್ಜುಗೊಳಿಸುವಿಕೆ ಮತ್ತು ಜಾಗೃತಿಗೆ ಅಸಾಧಾರಣ ಪ್ರಚಾರವೂ ನೀಡಲಾಗಿತ್ತು. 85 ದಶಲಕ್ಷ ಹೊಸ ಮತದಾರರು ಈ ಬಾರಿ ಮತಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರು.

ಭಾನುವಾರು 59 ಸೀಟುಗಳಿಗೆ ಕೊನೆಯ ಚರಣದ ಮತದಾನ ನಡೆಯಿತು. ಒಟ್ಟು 542 ಸೀಟುಗಳಿಗೆ ಚುನಾವಣೆ ಆಯಿತು. ತಮಿಳುನಾಡಿನ ವೆಲ್ಲೋರ್ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಮತದಾನವನ್ನು ರದ್ದುಪಡಿಸಿತ್ತು. ಅಕ್ರಮ ಹಣ ಬಳಕೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. 545 ಸದಸ್ಯರುಳ್ಳ ಲೋಕಸಭೆಗೆ ಇಬ್ಬರು ಆಂಗ್ಲೋ ಇಂಡಿಯನ್ನರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

ಹಿಮಾಚಲ ಪ್ರದೇಶದ ಕಿನ್ನೌರ್ ನಲ್ಲಿ 102 ವರ್ಷದ ಶ್ಯಾಮ್ ಸರನ್ ನೇಗಿಯವರು ಮತ ಚಲಾಯಿಸಿದರು. 1951ರಿಂದ ಹಿಡಿದು ಇದುವರೆಗಿನ ಎಲ್ಲಾ ಚುನಾವಣೆಗಳಲ್ಲಿ ಅವರು ಮತದಾನ ಮಾಡಿದ್ದಾರೆ. ಹಿಮಾಚಲ ಪ್ರದೇಶದ ಜತೆಗೆ ಬಿಹಾರ, ಪಶ್ಚಿಮ ಬಂಗಾಳ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಜಾರ್ಖಂಡ್ ಚಂಡೀಗಢದಲ್ಲಿ ಕೊನೆ ಹಂತದ ಮತದಾನ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 918 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಕೊನೆಯ ಹಂತದ ಚುನಾವಣೆಯಲ್ಲಿ 10 ಮಿಲಿಯನ್ ಮತದಾರರು ತಮ್ಮಮತಗಳನ್ನು ಚಲಾಯಿಸಲು ಅರ್ಹರಾಗಿದ್ದರು ಮತ್ತು ಶೇ. 64%ರಷ್ಟು ಮತದಾನ ನಡೆದಿದೆ.

ಚುನಾವಣಾ ಆಯೋಗವು ಮತದಾರರ ಲಿಂಗ ಸಮಾನತೆಗಾಗಿ ಪ್ರಶಂಸೆಗೆ ಅರ್ಹವಾಗಿದೆ. 2009ರ ಲೋಕಸಭೆ ಚುನಾವಣೆಯಲ್ಲಿ ಪುರುಷ ಮತ್ತು ಮಹಿಳಾ ಮತದಾರರ ಪೈಕಿ ಒಂಬತ್ತುಪ್ರತಿಶತದಷ್ಟು ಅಂತರ ಇತ್ತು. ಇದು 2014 ರಲ್ಲಿ 1.4 ಶೇಕಡಕ್ಕೆ ಇಳಿದಿದೆ.  ಪ್ರಸ್ತುತ ಚುನಾವಣೆಯಲ್ಲಿ ಕೇವಲ 0.4 ಶೇಕಡಕ್ಕೆ ಇಳಿದಿದೆ.

38 ದಿನಗಳಲ್ಲಿ ಚುನಾವಣಾ ಆಯೋಗವು ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಇಲಾಖೆಗಳ ಲಕ್ಷಾಂತರ ಸಿಬ್ಬಂದಿಗಳ ಸಹಾಯದಿಂದ ಮತದಾನ ನಡೆಸಿತು. ಅರೆಸೇನಾ ಪಡೆಗಳುನ್ಯಾಯೋಚಿತ ಮತದಾನವನ್ನು ಖಾತರಿಪಡಿಸಿದವು. ಭಯ ಮತ್ತು ಪ್ರಚೋದನೆ ಇಲ್ಲದೆ ಚುನಾವಣೆಗಳನ್ನು ನಡೆಸಬೇಕೆಂಬ ಉದ್ದೇಶದ ಪ್ರಕಾರ, ಚುನಾವಣಾ ಆಯೋಗವು ನಗದು, ಮದ್ಯ ಮತ್ತು ಇತರ ರೀತಿಯ ಅಕ್ರಮಗಳಿಗೆ ಕಡಿವಾಣ ಹಾಕಿತ್ತು. ವಶಪಡಿಸಿಕೊಂಡ ನಿಷೇಧಿತ ವಸ್ತುಗಳ ಒಟ್ಟು  ಮೊತ್ತ ರೂ. 3,400 ಕೋಟಿ. ಈ ಹಣವನ್ನು ದೇಶದ ಬಜೆಟ್ ಗೆ ಬಳಸಿಕೊಳ್ಳಲಾಗುವುದು.

ಒಟ್ಟು 17 ಲೋಕಸಭೆ ಚುನಾವಣೆಗಳಲ್ಲಿ ಒಂಬತ್ತನೇ ಬಾರಿಗೆ ಮತದಾರರು 60%ರಷ್ಟು ಹೆಚ್ಚು ಮತದಾನ ಮಾಡಿದ್ದಾರೆ. ಭಾರತದ ಪ್ರಜಾಪ್ರಭುತ್ವದ ರಾಜಕೀಯದಲ್ಲಿ ಜನರಿಗೆಆಳವಾದ ನಂಬಿಕೆ ಇದೆ ಎಂಬುದಕ್ಕೆ ಇದು ಸಾಕ್ಷಿ. ಮೇ 23 ರಂದು ಮತಗಳನ್ನು ಎಣಿಸಲಾಗುವುದು. 2019ರ ಲೋಕಸಭೆ ಚುನಾವಣೆಗಳ ಫಲಿತಾಂಶ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಲೇಖನ : ಮನೀಶ್ ಆನಂದ್, ಹಿರಿಯ ವರದಿಗಾರರು, ನ್ಯೂ ಇಂಡಿಯನ್ ಎಕ್ಸ್ ಪ್ರೆಸ್