ಜನರಲ್ ಬಾಜ್ವಾ ಅವಧಿ ವಿಸ್ತರಣೆಗೆ ಸಂಬಂಧಿಸಿದ ವಿವಾದ

ಇದೇ ಆಗಸ್ಟ್ 19ರಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ಅಲ್ಲಿನ‌ ಸೇನೆಯ ಚೀಫ್ ಜನರಲ್ ಕಮರ್ ಜಾವೇದ್ ಬಜ್ವಾ ಅವರ ಸೇವಾ ಅವಧಿಯನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಿ ಹೊರಡಿಸಿದ ಆದೇಶವನ್ನು ಮಂಗಳವಾರ ವಿಶೇಷ ಪ್ರಕರಣವೊಂದರಲ್ಲಿ ಪಾಕ್ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. 59 ವರ್ಷದ ಜನರಲ್ ಬಾಜ್ವಾ ಅವರು ತಮ್ಮ ಮೊದಲ ಹಂತದ ಸೇನಾ ಮುಖ್ಯಸ್ಥರಾಗಿ ಇದೇ 28ರ ಮಧ್ಯರಾತ್ರಿ ನಿವೃತ್ತರಾಗಬೇಕಿತ್ತು ಆದರೆ ಈ ವಿಷಯದಲ್ಲಿ ಸಂಸತ್ತು ಶಾಸನವನ್ನು ಅಂಗೀಕರಿಸಲಿದೆ ಎಂಬ ಭರವಸೆಯ ಮೇರೆಗೆ ಸುಪ್ರೀಂ ಕೋರ್ಟ್‌ನಿಂದ 6 ತಿಂಗಳ ಷರತ್ತುಬದ್ಧ ಅನುಮತಿ ಪಡೆಯಿತು.

ಈ ವಿಷಯವು ದೇಶದಲ್ಲಿ ವ್ಯಾಪಕ ಚರ್ಚೆಗೆ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ಮಾಡುವುದಕ್ಕೆ ಕಾರಣವಾಯಿತು.

ಮುಖ್ಯ ನ್ಯಾಯಮೂರ್ತಿ ಆಸಿಫ್ ಸಯೀದ್ ಖೋಸಾ ನೇತೃತ್ವದ ಸುಪ್ರೀಂ ಕೋರ್ಟ್‌ನ 3 ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಕಾನೂನು ಮತ್ತು ಆಡಳಿತಾತ್ಮಕ ಅಂಶಗಳ ಬಗ್ಗೆ ಈ ನಿರ್ಧಾರವನ್ನು ತೆಗೆದುಕೊಂಡಿತು. ಸರ್ಕಾರದ ಆದೇಶವನ್ನು ವಜಾಗೊಳಿಸಿ ಇಡೀ ಪ್ರಕ್ರಿಯೆಯನ್ನು “ತಲೆಕೆಳಗಾಗಿಸುವ ಮೂಲಕ” ನ್ಯಾಯಪೀಠವು ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮತ್ತು ಅಧ್ಯಕ್ಷ ಆರಿಫ್ ಅಲ್ವಿ ಇಬ್ಬರಿಗೂ ಭಾರಿ ಮುಜುಗರವನ್ನು ಉಟುಮಾಡಿತು. ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಸ್ತಾಪವನ್ನು ಮೊದಲಿಗೆ ಸಚಿವ ಸಂಪುಟ ಸಭೆಯ ಮುಂದಿಟ್ಟು ಅಂಗೀಕಾರ ಪಡೆಯಬೇಕಾಗಿತ್ತು ಎಂದು ನ್ಯಾಯಾಲಯವು ಹೇಳಿತು. ಆಗ ಮಾತ್ರ ಪ್ರಧಾನಿ ಮತ್ತು ರಾಷ್ಟ್ರಪತಿಗಳು ಇದರ ಬಗ್ಗೆ ಕ್ರಮ ಕೈಗೊಳ್ಳಬಹುದಾಗಿತ್ತು. ಮಾಧ್ಯಮಗಳ ವರದಿ ಪ್ರಕಾರ 25 ಮಂತ್ರಿಗಳ ಪೈಕಿ 11 ಮಂದಿ ಮಾತ್ರ ಈ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ. ಸೇನೆಯ ನಿಯಮಗಳಲ್ಲಿ ಎಲ್ಲಿಯೂ “ವಿಸ್ತರಣೆ” ಎಂಬ ಪದದ ಉಲ್ಲೇಖವಿಲ್ಲ ಮತ್ತು ಸೇನಾ ಮುಖ್ಯಸ್ಥರ ಅಧಿಕಾರಾವಧಿಯನ್ನು ಎಲ್ಲಿಯೂ ನಿರ್ದಿಷ್ಟಪಡಿಸಲಾಗಿ ಹೇಳಿಲ್ಲ ಎಂದು ನ್ಯಾಯಾಲಯವು ಸೂಚಿಸಿತು.

ತಕ್ಷಣವೇ ಹಾನಿ ನಿಯಂತ್ರಣಕ್ಕೆ ಮುಂದಾದ ಪ್ರಧಾನಿ ಇಮ್ರಾನ್ ಖಾನ್ ತುರ್ತು ಸಚಿವ ಸಂಪುಟ ಸಭೆ ನಡೆಸಿ ತಾವು ಮೊದಲು ಹೊರಡಿಸಿದ್ದ ಆದೇಶವನ್ನು ಹಿಂಪಡೆದುಕೊಂಡರು ಮತ್ತು ಪಾಕಿಸ್ತಾನ ರಕ್ಷಣಾ ಸೇವೆಗಳ ನಿಯಮಗಳಿಗೆ ತಿದ್ದುಪಡಿ ಮಾಡಿ ಅದರಲ್ಲಿ ವಿಸ್ತರಣೆ ಪದವನ್ನು ಸೇರಿಸಿದರು. ಹೊಸ ರಕ್ಷಣಾ ಸೇವೆಗಳ ನಿಯಮದ ಅಡಿ ಜನರಲ್ ಬಜ್ವಾ ಅವರಿಗೆ “ಪ್ರಾದೇಶಿಕ ಭದ್ರತಾ ವಾತಾವರಣ” ಎಂಬ ಹೊಸ ಸ್ಥಾನವನ್ನು ನೀಡಲಾಗಿದೆ. ಆದರೆ ಸಂಪೂರ್ಣ 3 ವರ್ಷಗಳ ಅವಧಿಗೆ‌ ಬಾಜ್ವಾ ಅವರ ಸೇವಾವಧಿ ವಿಸ್ತರಣೆ ನೀಡಲು ಇದು ನಿಜವಾದ ಕಾರಣವಾಗಬಹುದೇ?

ಹಿಂದೆ ಯಾವಾಗಲೂ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ದೇಶದ ಸೇನೆಯ ವಿರುದ್ಧ ಈ ರೀತಿಯ ಆದೇಶ ನೀಡಿರಲಿಲ್ಲ. ಏನಾದರೂ ನಾಗರಿಕ ಸರ್ಕಾರಗಳು ಸಮರ್ಥವಾಗಿ ಕೆಲಸಮಾಡಲು ವಿಫಲವಾದ ಸಂದರ್ಭದಲ್ಲಿ ಮಾತ್ರ ಸೇನೆಯು ಹಸ್ತಕ್ಷೇಪ ಮಾಡುವ ಅವಶ್ಯಕತೆಯಿದೆ ಎಂಬ ಸಂಗತಿಯು ದೇಶದಲ್ಲಿ ಮಿಲಿಟರಿ ದಂಗೆಗಳು ಪುನರಾವರ್ತನೆ ಆಗಲು ಕಾರಣವಾಗಿವೆ.  9/11ರ ದಾಳಿಯ ಬಳಿಕ ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಜನರಲ್ ಮುಷರಫ್ ಅವರ ಹೆಚ್ಚುವರಿ ಸಾಂವಿಧಾನಿಕ ಚಟುವಟಿಕೆಗಳನ್ನು ಅನುಮೋದಿಸಿತು ಅಷ್ಟು ಮಾತ್ರವಲ್ಲದೆ ಚುನಾವಣೆ ನಡೆಸುವುದಕ್ಕೆ ಮತ್ತು ಸಂವಿಧಾನವನ್ನು ತಿದ್ದುಪಡಿ ಮಾಡುವುದಕ್ಕೆ 3 ವರ್ಷಗಳ ಕಾಲವಕಾಶ ನೀಡಿತು. ಅದರಂತೆ ಪ್ರಭಾವೀ ಸೇನೆಯು ತನ್ನ ಅಸ್ತಿತ್ವದ ಅರ್ಧಕ್ಕಿಂತ ಹೆಚ್ಚು ಕಾಲ ಪಾಕಿಸ್ತಾನವನ್ನು‌ ಆಳಿತು. ಭದ್ರತೆ ಮತ್ತು ಬಾಹ್ಯ ವ್ಯವಹಾರಗಳ ವಿಷಯಗಳ ಮೇಲೆ ಸಾಕಷ್ಟು ಪ್ರಭಾವ ಬೀರಿತು. ನ್ಯಾಯಾಲಯದ ತೀರ್ಪುಗಿಂತ ಹೆಚ್ಚಾಗಿ ಸರ್ಕಾರದ ಅಧಿಸೂಚನೆಯನ್ನು ಅಮಾನತುಗೊಳಿಸುವ ಸಂದೇಶ ಬಹಳ ಮುಖ್ಯವಾಗಿ ಪರಿಣಮಿಸಿತು. ಈ ಹಿಂದೆ ಐದು ಅಥವಾ ಆರು ಜನರಲ್‌ಗಳ ಸೇವಾವಧಿ ವಿಸ್ತರಣೆ ಮಾಡಿರುವ ಬಗ್ಗೆಯೂ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತು. ಈ ಆಕ್ಷೇಪಣೆಗಳನ್ನು ಪರಿಗಣಿಸಲಾಗಿದೆ ಇಂಥ ಪ್ರಸಂಗ ಮತ್ತೆ ಸಂಭವಿಸಬಾರದು ಎಂದು ಹೇಳಿತು.

ಕಾನೂನುಬದ್ಧತೆಗಳ ಹೊರತಾಗಿಯೂ, ಅಕ್ರಮ ಹಣದ ನಿಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ನ್ಯಾಯಮೂರ್ತಿಗಳ ವಿರುದ್ಧದ ಇತ್ತೀಚಿಗೆ ಅಧ್ಯಕ್ಷೀಯ ಉಲ್ಲೇಖಗಳು ಬರುವುದರಲ್ಲಿ ಪ್ರಧಾನಿ ಕಚೇರಿಯ ಪಾತ್ರವಿರಬಹುದೆಂದು ಅದಕ್ಕೆ ಪ್ರತೀಕಾರವಾಗಿ ಈಗ ನ್ಯಾಯಾಲಯವು ಪ್ರಧಾನ ಮಂತ್ರಿ ಕಚೇರಿಯಲ್ಲಿ ಸ್ನೂಕ್ ಮಾಡುತ್ತಿದೆಯೇ ಎಂಬ ಆಶ್ಚರ್ಯಕರ ವ್ಯಾಖ್ಯಾನಗಳು ಕೇಳಿಬರುತ್ತಿವೆ. ನ್ಯಾಯಾಧೀಶರ ನೇಮಕದ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವ ಬಗ್ಗೆ ಕಾನೂನು ಸಮುದಾಯವು ತೀವ್ರ ಅಸಮಾಧಾನವನ್ನು ಹೊರಹಾಕುತ್ತಿದೆ. ಬಾಜ್ವಾ ಅವರ ಸೇವಾವಧಿ ವಿಸ್ತರಣೆಯ ವಿರುದ್ಧ ಪಾಕಿಸ್ತಾನದ ಬಾರ್ ಕೌನ್ಸಿಲ್ ಮುಂದಿನ ವಾರ ಮುಷ್ಕರಕ್ಕೆ ಕರೆ ಕೊಟ್ಟಿದೆ. ಈ ವಿಸ್ತರಣೆಗೆ ವಿವಿಧ ರಾಜಕೀಯ ಪಕ್ಷಗಳು ಕೂಡ ವಿರೋಧ ವ್ಯಕ್ತಪಡಿಸಿವೆ. ಕಾಕತಾಳೀಯ ಎಂಬಂತೆ ಜನರಲ್ ಮುಷರಫ್ ವಿರುದ್ಧದ ದೇಶದ್ರೋಹ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ದಿನನಿತ್ಯದ ವಿಚಾರಣೆಗಳು ಕೂಡ ಇದೇ ಡಿಸೆಂಬರ್ 5 ರಿಂದ ಪ್ರಾರಂಭವಾಗುತ್ತವೆ.

ಈ ಎಲ್ಲಾ ಬೆಳವಣಿಗೆಗಳಿಂದಾಗಿ ಇಮ್ರಾನ್ ಖಾನ್ ಸರ್ಕಾರವನ್ನು ಸೈನ್ಯಕ್ಕೆ ಮಾರಾಟ ಮಾಡಲಾಗಿದೆ, ಇದು ಚುನಾಯಿತ ಸರ್ಕಾರ ಎನ್ನುವುದಕ್ಕಿಂತ ಹೆಚ್ಚಾಗಿ ಆಯ್ಕೆಯಾದ ಸರ್ಕಾರ ಎಂಬ ಅಪಖ್ಯಾತಿಯನ್ನು ಗಳಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜನರಲ್ ಬಜ್ವಾ ಅವರಿಗೆ 3 ವರ್ಷಗಳ ಸೇವಾವಧಿ ವಿಸ್ತರಣೆ ಮಾಡುವ ಮೂಲಕ ಇಮ್ರಾನ್ ಖಾನ್ ಸೈನ್ಯಕ್ಕೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.  ಸರ್ಕಾರವನ್ನು ಪ್ರತಿನಿಧಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಕೆಲವೇ ಗಂಟೆಗಳಲ್ಲಿ ಈ ನಿಲುವನ್ನು ಬೆಂಬಲಿಸುವ ದೃಷ್ಟಿಯಿಂದ ಕಾನೂನು ಸಚಿವ ಫರೋಗ್ ನಸೀಮ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಸರ್ಕಾರ ಮರಳಿ ಹಳಿಗೆ ಮರಳುತ್ತೋ ಇಲ್ಲವೋ, ಈ ಘಟನೆಯು ದೇಶದ ಸಮಸ್ಯೆಗಳನ್ನು ನಿಭಾಯಿಸಲು ಸರ್ಕಾರವು ಅಸಮರ್ಥವಾಗಿದೆ ಎಂಬುದನ್ನು ಬಹಿರಂಗಪಡಿಸಿದೆ. ಕುತೂಹಲಕಾರಿ ಸಂಗತಿಯೆಂದರೆ ಜನರಲ್ ಬಜ್ವಾ ಅವರು ಅಹ್ಮದಿ ಎಂಬ ಇಸ್ಲಾಂ ಧರ್ಮದ ಪಂಥವರಾಗಿದ್ದು, ಅವರು ಪಾಕಿಸ್ತಾನದಲ್ಲಿ ಮುಸ್ಲಿಮೇತರರು ಎಂದು ಘೋಷಿಸಲ್ಪಟ್ಟಾಗಿನಿಂದ ಕಿರುಕುಳಕ್ಕೆ ಗುರಿಯಾಗುತ್ತಿದ್ದಾರೆ. ಅದೇ ಕಾರಣಕ್ಕೆ ಅವರ ಸೇವಾವಧಿ ವಿಸ್ತರಣೆಯನ್ನು ವಿರೋಧಿಸಿ ಪೇಶಾವರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಾಲಯವು ಈಗ ಈ ಪ್ರಕರಣವನ್ನು ಯಾವ ದೃಷ್ಟಿಕೋನದಿಂದ ನೋಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಸ್ಕ್ರಿಪ್ಟ್: ಅಶೋಕ್ ಹ್ಯಾಂಡೂ, ರಾಜಕೀಯ ನಿರೂಪಕ