ಯುರೋಪ್ ಒಕ್ಕೂಟದ ವಿದೇಶಾಂಗ ವ್ಯವಹಾರ ಮತ್ತು ರಕ್ಷಣಾ ನೀತಿಯ ಮುಖ್ಯಸ್ಥರಿಂದ ಭಾರತದ ಜೊತೆಗಿನ ಬಲಿಷ್ಠ ಭಾಂದವ್ಯದ ಬಗ್ಗೆ ಪುನರುಚ್ಚರಣೆ

ಯುರೋಪ್ ಒಕ್ಕೂಟದ  ವಿದೇಶಾಂಗ ವ್ಯವಹಾರ  ಮತ್ತು ರಕ್ಷಣಾ ನೀತಿಯ  ಉನ್ನತ ಪ್ರತಿನಿಧಿ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ, ಅವರು 2020ರ ರೈಸಿನಾ ಸಂವಾದದಲ್ಲಿ ಭಾಗವಹಿಸಿದ್ದರು. ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ನಡುವಿನ ಸಮಾನತೆಗಳನ್ನು ಪುನರುಚ್ಚರಿಸುತ್ತಾ, WTOದ  ವಿವಾದ ಇತ್ಯರ್ಥ ಕ್ರಮದ ತಡೆಗಟ್ಟುವಿಕೆ ಯುರೋಪ್, ಭಾರತ ಮತ್ತು ಅನೇಕ ಆಗ್ನೇಯ ಏಷ್ಯಾದ ದೇಶಗಳಿಗೆ ಕಳವಳಕ್ಕೆ ಕಾರಣವಾಗಿರುವ ಸಮಯದಲ್ಲಿ, ಎರಡೂ ಪಕ್ಷಗಳು ನಿಯಮ-ಆಧಾರಿತ ಬಹುಪಕ್ಷೀಯ ಆದೇಶವನ್ನು ಸಮರ್ಥಿಸಿಕೊಳ್ಳುವ ಅವಶ್ಯಕತೆಯಿದೆಯೆಂದು ಫಾಂಟೆಲ್ಲೆಸ್ ತಿಳಿಸಿದರು. ಈ ನಿಟ್ಟಿನಲ್ಲಿ, ಈ ಬಿಕ್ಕಟ್ಟನ್ನು ಮುರಿಯಲು EU,   ಪ್ರಸ್ತಾಪಗಳನ್ನು ಮಾಡಿದೆ ಎಂದು ಉನ್ನತ ಪ್ರತಿನಿಧಿ ಮಾಹಿತಿ ನೀಡಿದರು. ಎರಡೂ ಪಕ್ಷಗಳ ಬಲವಾದ ಹಿತಾಸಕ್ತಿಗೆ ಈ ಸಮಸ್ಯೆಯನ್ನು ಪರಿಹರಿಸುವುದು ಮತ್ತು ವಾಸ್ತವಿಕ ಪರಿಹಾರಗಳನ್ನು ನೀಡುವುದು ಅವಶ್ಯ.

ಕಡಲ್ಗಳ್ಳತನ ಮತ್ತು ಸಮುದ್ರ ಸಂಪನ್ಮೂಲಗಳ ಸಂರಕ್ಷಣೆ ಮತ್ತು ನಿರ್ವಹಣೆಯಂತಹ ಹಲವಾರು ಸವಾಲುಗಳಿಂದ ಜಾಗತಿಕ ಸಮುದಾಯಕ್ಕೆ ಬೆದರಿಕೆ ಬಂದಾಗ,  ಕಡಲ ಸುರಕ್ಷತೆಯನ್ನು ಬಲಪಡಿಸುವುದು ಅತ್ಯಂತ ಕಾಳಜಿಯಾಗಿದೆ. ಆದ್ದರಿಂದ, ಸಮುದ್ರ ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಒಟ್ಟಾಗಿ ಕೆಲಸ ಮಾಡುವುದು ಕಡ್ಡಾಯವಾಗಿದೆ.  ಹಾರ್ನ್ ಆಫ್ ಆಫ್ರಿಕಾ ಮತ್ತು ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಕಡಲ್ಗಳ್ಳತನವನ್ನು ಎದುರಿಸಲು ನಡೆಸಿದ ‘ಆಪರೇಷನ್ ಅಟ್ಲಾಂಟಾ’ ಭಾರತದೊಂದಿಗಿನ ಸಹಕಾರಕ್ಕೆ ಉತ್ತಮ ಉದಾಹರಣೆಯಾಗಿದೆ.

2025ರ  ಆಂಚಿಯಲ್ಲಿ,  ಭಾರತ-EU ಕಾರ್ಯತಂತ್ರದ ಸಹಭಾಗಿತ್ವಕ್ಕಾಗಿ, ಸುರಕ್ಷತೆಯಿಂದ ಹಿಡಿದು ಡಿಜಿಟಲ್ ಅಥವಾ ಹವಾಮಾನ ಬದಲಾವಣೆಯವರೆಗಿನ ಪ್ರದೇಶಗಳಲ್ಲಿ ಸಹಕಾರವನ್ನು ಒಳಗೊಂಡ ಹೊಸ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು EU ಉನ್ನತ ಪ್ರತಿನಿಧಿ ಒತ್ತಿಹೇಳಿದರು. ಈ ಪಾಲುದಾರಿಕೆಗಾಗಿ ಮಾತುಕತೆಗಳು ಈಗಾಗಲೇ ಪ್ರಾರಂಭವಾಗಿದ್ದು, 2020ರ ಮಾರ್ಚ್ 13ರಂದು ನಡೆಯಲಿರುವ ಮುಂದಿನ ಭಾರತ-ಯುರೋಪ್ ಶೃಂಗಸಭೆಯಲ್ಲಿ ಅನುಮೋದನೆಗೆ ಸಿದ್ಧವಿರುತ್ತದೆ.

ಎರಡು ಕಡೆಯವರು ಮಾಡಬೇಕಾದ ಮತ್ತೊಂದು ಮಹತ್ವದ ಕ್ಷೇತ್ರವೆಂದರೆ,  ಹವಾಮಾನ ಬಿಕ್ಕಟ್ಟಿನ ಪರಿಣಾಮವನ್ನು ಕಡಿಮೆ ಮಾಡಲು ಜಂಟಿಯಾಗಿ ಮಾರ್ಗಗಳು ಮತ್ತು ವಿಧಾನಗಳನ್ನು ರೂಪಿಸುವ ಕಾರ್ಯವಾಗಿದೆ. ಪ್ಯಾರಿಸ್ ಹವಾಮಾನ ಒಪ್ಪಂದದ ರಕ್ಷಣೆ ಮತ್ತು ಅನುಷ್ಠಾನವು ಈ ಸಂಬಂಧದಲ್ಲಿ ನಿರ್ಣಾಯಕವಾಗಿದ್ದು, ಇದು ದೇಶಗಳ ವೈಯಕ್ತಿಕ ಮತ್ತು ಸಾಮೂಹಿಕ ಹವಾಮಾನ ಗುರಿಗಳ ಪಾರದರ್ಶಕ ಮೇಲ್ವಿಚಾರಣೆ, ವರದಿ ಮತ್ತು ವರ್ಧನೆಗೆ ಒಂದು ಚೌಕಟ್ಟನ್ನು ಸೃಷ್ಟಿಸುತ್ತದೆ. ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು,  ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳನ್ನು ತಪ್ಪಿಸಲು, ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಮತ್ತು ಒಟ್ಟಾಗಿ ಕಾರ್ಯನಿರ್ವಹಿಸುವ ಏಕೀಕೃತ ಪ್ರಯತ್ನಗಳ ಅವಶ್ಯಕತೆಯಿದೆ.

2016ರಲ್ಲಿ EU-ಇಂಡಿಯಾ ಕ್ಲೀನ್ ಎನರ್ಜಿ ಅಂಡ್ ಕ್ಲೈಮೇಟ್ ಪಾರ್ಟ್‌ನರ್‌ಶಿಪ್ (CECP)ನಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಮತ್ತು ಯುರೋಪಿಯನ್ ನಾಯಕರ ನಡುವಿನ ಒಪ್ಪಂದವು ಸಕಾರಾತ್ಮಕ ಬೆಳವಣಿಗೆಯಾಗಿದೆ. ಇದು ಹವಾಮಾನ ಬದಲಾವಣೆ ಮತ್ತು ಶಕ್ತಿಯ ಬಗ್ಗೆ EU ಮತ್ತು ಭಾರತದ ನಡುವಿನ ಸಹಕಾರವನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಎಲ್ಲರಿಗೂ ಸುರಕ್ಷಿತ, ಸ್ವಚ್ಚ,  ಕೈಗೆಟುಕುವ ಮತ್ತು ವಿಶ್ವಾಸಾರ್ಹ ಇಂಧನ ಪೂರೈಕೆ ಮತ್ತು ಪ್ಯಾರಿಸ್ ಒಪ್ಪಂದದ ಅನುಷ್ಠಾನದ ಪ್ರಗತಿ ಖಾತ್ರಿಪಡಿಸುವ ದೃಷ್ಟಿಯೂ ಆಗಿದೆ.  

ಭಾರತ ಮತ್ತು EU  ಹಲವಾರು ಸಂದರ್ಭಗಳಲ್ಲಿ ಒಗ್ಗೂಡಿ ಭಯೋತ್ಪಾದನೆ, ಉಗ್ರವಾದ ಮತ್ತು ತೀವ್ರಗಾಮಿಕರಣದ ವಿರುದ್ಧ ಬೆಂಬಲ ವ್ಯಕ್ತಪಡಿಸಿವೆ. ಯುರೋಪ್, ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ಭಯೋತ್ಪಾದಕ ಪಡೆಗಳನ್ನು ಸೋಲಿಸುವಲ್ಲಿನ ಪ್ರಗತಿಯನ್ನು ಮುಂದುವರೆಸುವ ಮಹತ್ವವನ್ನು EU ಮತ್ತು ಭಾರತ ಈ ಹಿಂದೆ ಒತ್ತಿಹೇಳಿವೆ. ಹಿಂಸಾತ್ಮಕ ಉಗ್ರವಾದವನ್ನು ನಿಭಾಯಿಸಲು ಎರಡೂ ಕಡೆಯವರು ಗಮನಹರಿಸಿದ ಪರಿಣಾಮಕಾರಿ ಕಾರ್ಯವಿಧಾನವಾಗಿದೆ. ಈ ನಿಟ್ಟಿನಲ್ಲಿ, ಸಾಮರ್ಥ್ಯ ವೃದ್ಧಿಗೆ ಒತ್ತು ನೀಡಲು, ಆನ್‌ಲೈನ್ ಪ್ರಚಾರವನ್ನು ಗುರುತಿಸಲು, ತಡೆಗಟ್ಟಲು ಮತ್ತು ಎದುರಿಸಲು ಹಾಗೂ ಐಸಿಸ್ ಭಯೋತ್ಪಾದಕ ಜಾಲಗಳನ್ನು ತನಿಖೆ ಮಾಡಲು ಮತ್ತು ಎದುರಿಸಲು,    EU-ಇಂಡಿಯಾದ ಪ್ರತಿಭಯೋತ್ಪಾದ ಕತೆ (ಕೌಂಟರ್ ಟೆರರಿಸಂ) ಕಾರ್ಯಾಗಾರಗಳು ಭಾರತೀಯ ಮತ್ತು ಯುರೋಪಿಯನ್ ತಜ್ಞರನ್ನು ಒಟ್ಟುಗೂಡಿಸಲು ಸಹಾಯ ಮಾಡಿವೆ.

EU ಮತ್ತು ಭಾರತವು ತಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕಾದ ಒಂದು ಪ್ರಭಾವ ವಲಯವೆಂದರೆ  ವ್ಯಾಪಾರ ಕ್ಷೇತ್ರ ಆಗಿದೆ. ಭಾರತ-EU ಮುಕ್ತ ವ್ಯಾಪಾರ ಒಪ್ಪಂದ (FTA) ಕುರಿತು ಮಾತುಕತೆಗಳನ್ನು ಪುನರಾರಂಭಿಸಲು ಎರಡೂ ಪಕ್ಷಗಳು ಒತ್ತು ನೀಡಬೇಕು. ಅದು ಆಗಬೇಕಾದರೆ, ಎರಡೂ ಕಡೆಯಿಂದ ಕೆಲವು ಹೊಂದಾಣಿಕೆಯ ಅಗತ್ಯವಿದೆ. EU ಹೂಡಿಕೆಯನ್ನು FTAಯ ಭಾಗವಾಗಿ ನೋಡುವುದಿಲ್ಲ.  ವಾಹನಗಳು ಮತ್ತು ಮದ್ಯಸಾರಕ್ಕೆ ಮಾರುಕಟ್ಟೆ ಪ್ರವೇಶ ಹಾಗೂ ಸರ್ಕಾರದ ಖರೀದಿ ಮತ್ತು ಕಾರ್ಮಿಕ ಮಾನದಂಡಗಳ ಸೇರ್ಪಡೆ ಮುಂತಾದ ಕೆಲವು ಮೂಲಭೂತ ವಿಷಯಗಳ ಬಗ್ಗೆ ಅಭಿಪ್ರಾಯಗಳ ಒಮ್ಮುಖವಾದಾಗ ಮಾತ್ರ ಮಾತುಕತೆಗೆ ಕುಳಿತುಕೊಳ್ಳಲು EU ಒತ್ತಾಯಿಸುತ್ತದೆ. ಮತ್ತೊಂದೆಡೆ, ಕಾರ್ಮಿಕ ಮತ್ತು ಮಾನವ ಹಕ್ಕುಗಳ ಸಮಸ್ಯೆಯನ್ನು ಸೇರಿಸಲು EU  ಮಾಡಿದ ಪ್ರಯತ್ನವನ್ನು ಭಾರತ ಆಕ್ಷೇಪಿಸಿ. ಇದಕ್ಕಾಗಿ ಪ್ರತ್ಯೇಕ ಕಾರ್ಯ ಗುಂಪುಗಳನ್ನು ಸೂಚಿಸಿದೆ.

ಮಾರ್ಚ್ 2020ರಲ್ಲಿ ನಡೆಯಲಿರುವ   ಫಲದಾಯಕ ಭಾರತ-EU ಶೃಂಗಸಭೆಯು ಕಾರ್ಯತಂತ್ರದ ಸಹಭಾಗಿತ್ವದ ವಿಸ್ತರಣೆಗೆ ಕಾರಣವಾಗಬಹುದು ಹಾಗೂ ರಕ್ಷಣಾ ಮತ್ತು ವ್ಯಾಪಾರದ ಮೇಲಿನ ಸಹಕಾರವನ್ನು ಹೆಚ್ಚಿಸಬಹುದು ಎಂದು ಶ್ರೀ ಫಾಂಟೆಲ್ಲೆಸ್ ಹೇಳಿದ್ದಾರೆ.  ಪ್ರಜಾಪ್ರಭುತ್ವ, ಬಹುಪಕ್ಷೀಯತೆ ಮತ್ತು ನಿಯಮ-ಆಧಾರಿತ ಅಂತರರಾಷ್ಟ್ರೀಯ ಕ್ರಮಗಳ ಮೌಲ್ಯಗಳನ್ನು ಕಾಪಾಡುವುದು ಇವುಗಳನ್ನೊಳಗೊಂಡ ಆದ್ಯತೆ ಮತ್ತು ಬದ್ಧತೆಯನ್ನು ಭಾರತ ಮತ್ತು EU ಹಂಚಿಕೊಂಡಿವೆ. ಅಲ್ಲದೆ, ಎಲ್ಲವನ್ನೂ  ಒಳಗೊಂಡ (inclusive) ಮತ್ತು ಮುಕ್ತ ನೀತಿ ದೃಷ್ಟಿಕೋನವನ್ನು ಭಾರತ ಮತ್ತು EU ಎರಡೂ ಸಹ ಇಂಡೋ-ಪೆಸಿಫಿಕ್ ಬಗ್ಗೆ ಹಂಚಿಕೊಳ್ಳುವುದರಿಂದ, ಸುರಕ್ಷಿತ ಮತ್ತು ಭದ್ರ ನಿಯಮ-ಆಧಾರಿತ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಕ್ರಮವನ್ನು ನಿರ್ಮಿಸುವ ಸಲುವಾಗಿ, ಅನುಕೂಲಕರವಾದ ನೀತಿಗಳು ಮತ್ತು ಕಾರ್ಯತಂತ್ರಗಳನ್ನು ಜಂಟಿಯಾಗಿ ಅಳವಡಿಸುವುದಕ್ಕೆ ಭಾರತ ಮತ್ತು EU  ಕೈಜೋಡಿಸಬೇಕು.

ಲೇಖನ: ಡಾ. ಸಂಘಮಿತ್ರ  ಸರ್ಮ 

ಯೂರೋಪ್ ವ್ಯವಹಾರಗಳ ವಿಶ್ಲೇಷಕ