ನೈಜರ್ ಮತ್ತು ಟ್ಯು‌ನೀಷಿಯಾದ ಜೊತೆಗೆ ಬಲಿಷ್ಠಗೊಂಡ ಭಾರತದ ಬಾಂಧವ್ಯ

ಆಫ್ರಿಕನ್ ರಾಷ್ಟ್ರಗಳ ಮೇಲೆ ಹೆಚ್ಚು ಗಮನಹರಿಸುವ ಮತ್ತು ಅವರೊಂದಿಗೆ ಹೆಚ್ಚು ರಾಜತಾಂತ್ರಿಕ ಮತ್ತು ಆರ್ಥಿಕ ಸಂಬಂಧವನ್ನು ಬೆಳೆಸುವ ಪ್ರಯತ್ನದಲ್ಲಿ, ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್. ಜೈಶಂಕರ್ ಅವರು ಈ ವಾರದ ಆರಂಭದಲ್ಲಿ ನೈಜರ್ ಮತ್ತು ಟುನೀಶಿಯಾಗೆ ಭೇಟಿ ನೀಡಿದರು. ವಿಶ್ವಸಂಸ್ಥೆಯಲ್ಲಿ ಯುಎನ್ ಭದ್ರತಾ ಸಮಿತಿಯ ಖಾಯಂ ಸದಸ್ಯತ್ವಕ್ಕಾಗಿನ ಭಾರತದ ಪ್ರಯತ್ನಕ್ಕೆ ಸಹಾಯ ಮಾಡಿದ್ದರಿಂದ ನವದೆಹಲಿ ಈ ಆಫ್ರಿಕನ್ ರಾಷ್ಟ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ. ವಿದೇಶಾಂಗ ಸಚಿವಾಲಯದ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಆಫ್ರಿಕಾವು ವಿದೇಶಾಂಗ ಸಚಿವರ ಮೊದಲ ಆದ್ಯತೆ ಎಂಬುದು ಇದರಿಂದ ಸಾಬೀತಾಗುತ್ತದೆ.

ನೈಜರ್‌ನ ನಿಯಾಮಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ. ಜೈಶಂಕರ್ ಅವರು ನೈಜರ್ ಅಧ್ಯಕ್ಷ ಮಹಮದೌ ಇಸೌಫೌ ಅವರನ್ನು ಭೇಟಿ ಮಾಡಿದರು. ಎರಡೂ ನಾಯಕರು ಜಂಟಿಯಾಗಿ ಮಹಾತ್ಮ ಗಾಂಧಿ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ಉದ್ಘಾಟಿಸಿದರು. ಪ್ರಸ್ತುತ 150 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಮಹಾತ್ಮ ಗಾಂಧಿಯವರ ಸ್ಮರಣೆಯನ್ನು ಗೌರವಿಸಲು ಭಾರತವು ಆಫ್ರಿಕಾದಲ್ಲಿ ಸ್ಥಾಪಿಸಿದ ಮೊದಲ ಕೇಂದ್ರವಾಗಿದೆ. ಕೇಂದ್ರದ ಸ್ಥಾಪನೆಯು ಭಾರತ-ನೈಜರ್ ಸ್ನೇಹದ ಒಂದು ಹೆಗ್ಗುರುತಾಗಿದೆ. ಇದು ಆಫ್ರಿಕಾದ ಬಗ್ಗೆ ಭಾರತದ ದೃಢವಾದ ಬದ್ಧತೆಯ ಸಂಕೇತವಾಗಿದೆ. ಕೇಂದ್ರವನ್ನು ವಿಶಾಲವಾದ, ಆಧುನಿಕ ಮತ್ತು ಪರಿಸರ ಸ್ನೇಹಿ ಸೌಲಭ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ, ಇದರಲ್ಲಿ ಆಫ್ರಿಕನ್ ಯೂನಿಯನ್ ನ ಸದಸ್ಯ ರಾಷ್ಟ್ರಗಳು ಮತ್ತು ಇತರ ಉನ್ನತ ಮಟ್ಟದ ಸಮಾವೇಶಗಳಿಂದ ಉನ್ನತ ಮಟ್ಟದ ಮತ್ತು ವ್ಯಾಪಕ ಭಾಗವಹಿಸುವಿಕೆಯನ್ನು ವೀಕ್ಷಿಸಲು 2000 ಸಾಮರ್ಥ್ಯದ ಪೂರ್ಣ ಸಭಾಂಗಣವಿದೆ.

ನಿಯಾಮಿಯಲ್ಲಿದ್ದ ಸಮಯದಲ್ಲಿ, ವಿದೇಶಾಂಗ ಸಚಿವರು ನೈಜರ್ ಪ್ರಧಾನಿ ಶ್ರೀ ಬ್ರಿಗಿ ರಫಿನಿ ಅವರನ್ನು ಭೇಟಿ ಮಾಡಿದರು. ಅವರು ತಮ್ಮ ಸಹವರ್ತಿ ಕಲ್ಲಾ ಅಂಕೌರಾವ್ ಅವರೊಂದಿಗೆ ವ್ಯಾಪಕ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಿದರು. ಭಯೋತ್ಪಾದನೆಯನ್ನು ಎದುರಿಸುವ ಅಗತ್ಯತೆ ಸೇರಿದಂತೆ ಅಭಿವೃದ್ಧಿ ಮತ್ತು ಸುರಕ್ಷತೆಯ ಹಂಚಿಕೆಯ ಸವಾಲುಗಳನ್ನು ಚರ್ಚಿಸುವುದರ ಜೊತೆಗೆ ದ್ವಿಪಕ್ಷೀಯ ಸಂಬಂಧದ ಚೌಕಟ್ಟನ್ನು ಬಲಪಡಿಸುವ ಒಪ್ಪಂದಕ್ಕೂ ಉಭಯ ಪಕ್ಷಗಳು ಸಹಿ ಹಾಕಿದವು.

ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ಗಮನಾರ್ಹವಾಗಿ ವಿಸ್ತರಿಸಿದೆ. ಸಾರಿಗೆ, ವಿದ್ಯುದ್ದೀಕರಣ, ಸೌರಶಕ್ತಿ ಮತ್ತು ಕುಡಿಯುವ ನೀರಿನ ಯೋಜನೆಗಳಿಗಾಗಿ ಭಾರತ ನೈಜರ್‌ಗೆ ಲೈನ್ಸ್ ಆಫ್ ಕ್ರೆಡಿಟ್ ಒದಗಿಸಿದೆ. ನೈಜರ್‌ನ ಹಲವಾರು ಅಧಿಕಾರಿಗಳು ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ (ಐಟಿಇಸಿ) ಕಾರ್ಯಕ್ರಮದಡಿ ಭಾರತದ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಬಳಸಿಕೊಂಡಿದ್ದಾರೆ. ಕಳೆದ ಜುಲೈನಲ್ಲಿ ನಿಯಾಮಿಯಲ್ಲಿ ನಡೆದ ಅಫ್ರಿಕನ್ ಯುನಿಯನ್ ಶೃಂಗಸಭೆಯನ್ನು ಆಯೋಜಿಸಲು ಭಾರತವು ನೈಜರ್‌ಗೆ ಸಹಾಯವನ್ನು ವಿಸ್ತರಿಸಿದೆ.

ವಿದೇಶಾಂಗ ಸಚಿವರು ಟುನೀಷಿಯಾದ ಅಧ್ಯಕ್ಷರಾದ ಕೈಸ್ ಸೈಯದ್ ಅವರನ್ನು ಭೇಟಿಯಾದರು ಮತ್ತು ಅವರ ಟುನೀಷಿಯಾದ ವಿದೇಶಾಂಗ ಸಚಿವರಾದ ಸಬ್ರಿ ಬಚ್ಟೋಬ್ಜಿಯವರನ್ನು ಭೇಟಿಯಾದರು ಮತ್ತು ದ್ವಿಪಕ್ಷೀಯ ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವತ್ತ ಗಮನಹರಿಸುವ ವ್ಯಾಪಕ ಮಾತುಕತೆಗಳನ್ನು ನಡೆಸಿದರು ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ನಿಕಟವಾಗಿ ಕೆಲಸ ಮಾಡಲು ಒಪ್ಪಿದರು. ಟುನೀಶಿಯಾ ಫಾಸ್ಫೇಟ್ಗಳಿಗೆ ವಿಶ್ವಾಸಾರ್ಹ ಮೂಲವಾಗಿದೆ. ಟುನೀಶಿಯಾದ ಜಾಗತಿಕ ಫಾಸ್ಪರಿಕ್ ಆಸಿಡ್ ರಫ್ತಿನಲ್ಲಿ ಭಾರತವು ಸುಮಾರು 50 ಪ್ರತಿಶತದಷ್ಟು ಪಾಲನ್ನು ಹೊಂದಿದೆ. ಟುನೀಶಿಯಾದ ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನಕ್ಕಾಗಿ ಭಾರತ 100 ಐಟಿಇಸಿ ಸ್ಲಾಟ್‌ಗಳನ್ನು ಮತ್ತು 10 ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ವಿದ್ಯಾರ್ಥಿವೇತನವನ್ನು ನೀಡಿದೆ.

2017 ರಲ್ಲಿ ನವದೆಹಲಿಯಲ್ಲಿ ನಡೆದ ಟುನೀಶಿಯಾ-ಭಾರತ ಜಂಟಿ ಸಮಿತಿಯ ನಿರ್ಧಾರಗಳು ಮತ್ತು ಶಿಫಾರಸುಗಳ ಹಿನ್ನೆಲೆಯಲ್ಲಿ ಈ ಭೇಟಿ ಮುಖ್ಯವಾಗಿದೆ ಮತ್ತು ಆ ಸಂದರ್ಭದಲ್ಲಿ ದೂರದೃಷ್ಟಿಯ “ರಸ್ತೆ ನಕ್ಷೆ” ಯನ್ನು ಅಳವಡಿಸಿಕೊಳ್ಳುವುದು ಭಾರತ-ಟುನೀಶಿಯಾ ಸಹಭಾಗಿತ್ವಕ್ಕೆ ಹೊಸ ಆಯಾಮವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದಲ್ಲದೆ, ಇದು 1958 ರಿಂದ ಉತ್ತರ ಆಫ್ರಿಕಾದ ದೇಶಕ್ಕೆ ಭಾರತೀಯ ವಿದೇಶಾಂಗ ಸಚಿವರ 2 ನೇ ಅಧಿಕೃತ ಭೇಟಿಯಾಗಿದೆ.

ನೈಜರ್ ಮತ್ತು ಟುನೀಶಿಯಾ ಎರಡೂ ಯುಎನ್ ಸೆಕ್ಯುರಿಟಿ ಕೌನ್ಸಿಲ್ ನ ಶಾಶ್ವತವಲ್ಲದ ಸದಸ್ಯರಾಗಿರುವುದರಿಂದ ಭಾರತಕ್ಕೆ ಮುಖ್ಯವಾಗಿದೆ ಮತ್ತು ಪದೇ ಪದೇ ನವದೆಹಲಿಯು ಈ ಸ್ನೇಹಪರ ಆಫ್ರಿಕನ್ ರಾಷ್ಟ್ರಗಳ ಬೆಂಬಲವನ್ನು ಕಂಡುಕೊಂಡಿದೆ. ಆದ್ದರಿಂದ, ಭಾರತದ ರಾಜತಾಂತ್ರಿಕ ಪ್ರಭಾವವು ಅವರ ಬೆಂಬಲಕ್ಕಾಗಿ ಮೆಚ್ಚುಗೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.

ಬರಹ: ವಿನೀತ್ ವಾಹಿ, ಪತ್ರಕರ್ತ