ಭಾರತದ ಭವಿಷ್ಯದ ಆರ್ಥಿಕ ಉದ್ದೇಶಗಳು

ಭಾರತವು ಮುಂದಿನ ದಿನಗಳಲ್ಲಿ 5 ಟ್ರಿಲಿಯನ್ ಯುಎಸ್ ಡಾಲರ್ ಆರ್ಥಿಕತೆ ಸಾಧಿಸುವ ಗುರಿ ಹೊಂದಿದೆ. ಈ ಮಾರ್ಗಸೂಚಿಯು ಒಂದು ಕಡೆ ದೇಶೀಯ ವ್ಯಾಪಾರ ಮತ್ತು ಹೂಡಿಕೆಯ ಬಲವಾದ ವಾತಾವರಣವನ್ನು ನಿರ್ಮಿಸುವ ಅವಳಿ ಸ್ತಂಭಗಳ ಮೇಲೆ ನಿಂತಿದೆ ಮತ್ತು ಮತ್ತೊಂದೆಡೆ ಜಾಗತಿಕ ಆರ್ಥಿಕತೆಯೊಂದಿಗೆ ದೃಢವಾದ ಸಂಪರ್ಕವನ್ನು ರೂಪಿಸುತ್ತದೆ. ಈ ಗುರಿ ಸಾಧಿಸಲು, ಭಾರತ  ದಿವಾಳಿತನ ಸಂಹಿತೆ (ಐಬಿಸಿ) ಮತ್ತು ಸರಕು-ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಕಾನೂನು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ತನ್ನ ಉದ್ದೇಶಗಳನ್ನು ಉತ್ತೇಜಿಸಲು, ಭಾರತವು ತನ್ನ ಮಾರುಕಟ್ಟೆ ಹಿತಾಸಕ್ತಿಗಳನ್ನು ಮುಂದಿಡಲು ತನ್ನ ವ್ಯಾಪಾರ ಪಾಲುದಾರರೊಂದಿಗೆ ಪೂರಕತೆಯನ್ನು ಬೆಳೆಸುವ ಆಲೋಚನೆ ಹೊಂದಿದೆ.
ರಚನಾತ್ಮಕ ಮತ್ತು ಪರಸ್ಪರ ಲಾಭದಾಯಕ ಆರ್ಥಿಕ ಸಂಬಂಧಗಳನ್ನು ಸಕ್ರಿಯಗೊಳಿಸಲು, ಭಾರತವು ಪ್ರಾದೇಶಿಕ ವ್ಯಾಪಾರ ಮತ್ತು ದ್ವಿಪಕ್ಷೀಯ ಆರ್ಥಿಕ ಮಾತುಕತೆಗಳನ್ನು ತೆರೆಯಲು ನಿರ್ಧರಿಸಿತು.  ಇದರಲ್ಲಿ ಒಂದೆರಡು ಸ್ಥಗಿತಗೊಂಡಿದೆ. ಈ ಸಂಬಂಧಗಳು ಭಾರತವು ಒಳಮುಖವಾಗಿ ಕಾಣುವ, ಸಂರಕ್ಷಣಾವಾದಿ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಯನ್ನು ಹಿಂತೆಗೆದುಕೊಳ್ಳುವ ತಂತ್ರಗಳನ್ನು ಅನುಸರಿಸಲಿದೆ ಎಂಬ ಚಿಂತನೆಗಳನ್ನು ಹೊರಹಾಕುತ್ತದೆ.
ಕೆಲವು ವರ್ಷಗಳ ಹಿಂದೆ ಭಾರತವು ಅನೇಕ ಪ್ರಾದೇಶಿಕ ಗುಂಪುಗಳು ಮತ್ತು ಯುರೋಪಿಯನ್ ಯೂನಿಯನ್, ಯುರೇಷಿಯನ್ ಎಕನಾಮಿಕ್ ಯೂನಿಯನ್, ಆಸ್ಟ್ರೇಲಿಯಾ, ಮಾರಿಷಸ್, ಇಸ್ರೇಲ್ ಮತ್ತು ಇರಾನ್‌ನಂತಹ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳ  (ಎಫ್‌ಟಿಎ) ಮೂಲಕ ಸಕ್ರಿಯವಾಗಿ ಮಾತುಕತೆ ನಡೆಸುತ್ತಿತ್ತು. 2007ರಲ್ಲಿ ಪ್ರಾರಂಭವಾದ ಯುರೋಪಿಯನ್ ಒಕ್ಕೂಟದೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಲು ಭಾರತ ಆಸಕ್ತಿ ತೋರಿಸಿದೆ. ವೈನ್ಸ್ ಮತ್ತು ವಾಹನಗಳಿಗೆ ಮಾರುಕಟ್ಟೆ ಪ್ರವೇಶ‌, ಕಾರ್ಮಿಕ ಮಾನದಂಡಗಳು ಮತ್ತು ಸರ್ಕಾರದ ಸಂಗ್ರಹಣೆಗೆ ಸಂಬಂಧಿಸಿದ ನಿಬಂಧನೆಗಳನ್ನು ಸೇರಿಸುವುದರ ಕುರಿತು ಈ ಮಾತುಕತೆಗಳು ಸುಮಾರು ಏಳು ವರ್ಷಗಳ ಕಾಲ ಸ್ಥಗಿತಗೊಂಡಿದ್ದವು. ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರರಾಗಿರುವ ಇಯು ಜೊತೆಗಿನ ಬ್ರಾಡ್ ಬೇಸ್ಡ್ ಟ್ರೇಡ್ ಅಂಡ್ ಇನ್ವೆಸ್ಟ್ಮೆಂಟ್ ಅಗ್ರಿಮೆಂಟ್ (ಬಿಟಿಐಎ) ಆಭರಣಗಳು ಮತ್ತು ಜವಳಿಗಳಂತಹ ಕ್ಷೇತ್ರಗಳಿಗೆ ಸಹಾಯ ಮಾಡುತ್ತದೆ. ಬಲವಾದ ರಫ್ತು ಆಸಕ್ತಿಯನ್ನು ಹೊಂದಿರುವ ಉತ್ಪನ್ನಗಳ ಮೇಲಿನ ಸುಂಕ ಕಡಿತವನ್ನು ಇಯು ಖಂಡಿತವಾಗಿ ಎದುರು ನೋಡುತ್ತದೆ. ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ ಬ್ರೆಕ್ಸಿಟ್ ನಂತರದ ಯುಕೆ ಜತೆಗೆ ಸ್ವತಂತ್ರವಾಗಿ ತೊಡಗಿಸಿಕೊಳ್ಳಲು ಭಾರತ ಮುಕ್ತವಾಗಿದೆ. ಭಾರತವು ದೊಡ್ಡ ಪ್ರಮಾಣದ ವಲಸೆಗಾರರನ್ನು ಹೊಂದಿದೆ ಮತ್ತು ಐತಿಹಾಸಿಕ ಸಂಪರ್ಕಗಳನ್ನು ಪರಸ್ಪರ ಲಾಭಕ್ಕಾಗಿ ಬಳಸಿಕೊಳ್ಳಬಹುದು.
ಭಾರತ ಮತ್ತು ಯುಎಸ್ ಎಫ್ಟಿಎ ಶೈಲಿಯ ಒಪ್ಪಂದದ ಮಾತುಕತೆಯಲ್ಲಿ ಎಂದಿಗೂ ತೊಡಗಿಸಿಕೊಂಡಿಲ್ಲವಾದರೂ, ವ್ಯಾಪಾರ ಒಪ್ಪಂದ ಆರಂಭವಾಗುವ ನಿರೀಕ್ಷೆ ಇದೆ. 2020 ರ ಫೆಬ್ರವರಿ ಅಂತ್ಯದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಒಪ್ಪಂದಗಳನ್ನು ಮಾಡಬಹುದೆಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ. ಈ ಒಪ್ಪಂದವು ಯುಎಸ್ ಮತ್ತು ಭಾರತ ನಡುವಿನ ಕೆಲ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯಿದೆ. ವ್ಯಾಪಾರ ಅಸಮತೋಲನವನ್ನು ಪರಿಹರಿಸಲು ಮತ್ತು ಇಂಧನ ಸುರಕ್ಷತೆಯನ್ನು ಉತ್ತೇಜಿಸುವ ಕ್ರಮಗಳ ಹೊರತಾಗಿ ಭಾರತದಿಂದ ಆಯ್ದ ಉತ್ಪನ್ನಗಳ ಮೇಲಿನ ಸುಂಕದ ಹೆಚ್ಚಳ ಕಡಿಮೆ ಮಾಡುವ ನಿರೀಕ್ಷೆ ಇದೆ.
ಭಾರತವು ಆರ್‌ಸಿಇಪಿಯಿಂದ ಹಿಂದೆ ಸರಿಯಿತು, ಏಕೆಂದರೆ ಇದು ಪ್ರಾಯೋಗಿಕವಾಗಿ ದ್ವಿಪಕ್ಷೀಯ ಎಫ್‌ಟಿಎಗೆ ಇಳಿದಿದ್ದು, ಭಾರತದ ದೇಶೀಯ ಕೈಗಾರಿಕೆಗಳ ಅನಾನುಕೂಲತೆಗೆ ಕಾರಣವಾಗಿದೆ. ಸೇವಾ ಕ್ಷೇತ್ರಗಳಲ್ಲಿ ಪ್ರವೇಶವನ್ನು ನಿರ್ಬಂಧಿಸುವಾಗ ದೃಢವಾದ ಮೂಲ ನಿಯಮಗಳಿಲ್ಲದೆ ಸೂಕ್ಷ್ಮ ವಲಯಗಳನ್ನು ತೆರೆಯುವುದಕ್ಕೆ ಸಂಬಂಧಿಸಿದ ಬೇಡಿಕೆಗಳಿಗೆ ಒಪ್ಪುವುದು ಖಂಡಿತವಾಗಿಯೂ ಭಾರತದ ಹಿತಾಸಕ್ತಿಗಳಲ್ಲಿ ಇರಲಿಲ್ಲ. ಭಾರತವು ತನ್ನ ಪೂರ್ವ ಏಷ್ಯಾದ ನೆರೆಹೊರೆಯ ಆಸಿಯಾನ್, ಜಪಾನ್ ಮತ್ತು ದಕ್ಷಿಣ ಕೊರಿಯಾದೊಂದಿಗೆ ಕೆಲವು ಒಪ್ಪಂದಗಳನ್ನು ಪುನಃ ತೆರೆಯಲು ನಿರ್ಧರಿಸಿದೆ ಮತ್ತು ಆಸ್ಟ್ರೇಲಿಯಾದಂತಹ ದೇಶಗಳೊಂದಿಗೆ ಮಾತುಕತೆಗಳನ್ನು ಸ್ಥಗಿತಗೊಳಿಸಿತು- ಇವರೆಲ್ಲರೂ ಆರ್‌ಸಿಇಪಿ ಸಮುದಾಯದ ಭಾಗವಾಗಿದ್ದರು. ದಕ್ಷಿಣ ಕೊರಿಯಾ, ಜಪಾನ್ ಮತ್ತು ಆಸಿಯಾನ್‌ನೊಂದಿಗಿನ ನಮ್ಮ ಎಫ್‌ಟಿಎ ಬಳಕೆಯ ದರಗಳು ಕಡಿಮೆ ಇವೆ ಮತ್ತು ಸುಂಕ ಮತ್ತು ಸುಂಕ ರಹಿತ ಅಡೆತಡೆಗಳನ್ನು ಕಡಿಮೆ ಮಾಡಲು ಭಾರತವು ಷರತ್ತುಗಳನ್ನು ಬಳಸಲು ಉದ್ದೇಶಿಸಿದೆ. ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಇಸ್ರೇಲ್‌ನಂತಹ ದೇಶಗಳೊಂದಿಗೆ ಹೆಚ್ಚಿದ ಆರ್ಥಿಕ ತೊಡಗಿಸಿಕೊಳ್ಳುವಿಕೆ ಮತ್ತು ಇಎಇಯುನಂತಹ ಆರ್ಥಿಕ ಗುಂಪುಗಳ ಸಕಾರಾತ್ಮಕ ಪ್ರಯೋಜನಗಳನ್ನು ಅಧ್ಯಯನಗಳು ಸೂಚಿಸಿವೆ ಮತ್ತು ಈ ಮಾತುಕತೆಗಳು ಶೀಘ್ರದಲ್ಲೇ ಪ್ರಾರಂಭವಾಗಬಹುದು.
ಆದಾಗ್ಯೂ, ಅಂತಹ ಮಾತುಕತೆಗಳ ಅಡಿಪಾಯವು ಸರಕುಗಳು, ಸೇವೆಗಳು ಮತ್ತು ಹೂಡಿಕೆಗಳನ್ನು ಒಳಗೊಂಡಿರಬೇಕು. ತಿಳುವಳಿಕೆಯುಳ್ಳ ಚರ್ಚೆಗಳು ಮತ್ತು ಎಫ್ಟಿಎಗಳು ಭಾರತದ ಸೂಕ್ಷ್ಮ ಕ್ಷೇತ್ರಗಳಿಗೆ ಅಪಾಯವನ್ನುಂಟುಮಾಡುವುದಿಲ್ಲ ಎಂಬ ತಂತ್ರವನ್ನು ಭಾರತ ರೂಪಿಸಿದೆ. ಈ ಎಫ್ಟಿಎಗಳಿಂದ ಉಂಟಾಗುವ ಸುಂಕ ಮತ್ತು ನಿಯಂತ್ರಕ ಬದಲಾವಣೆಗಳಿಗೆ ಹೊಂದಿಕೊಳ್ಳಲು ಮಧ್ಯಸ್ಥಗಾರರಿಗೆ ಸಾಕಷ್ಟು ಸಮಯವನ್ನು ನೀಡಲಾಗುವುದು. ಹೀಗಾಗಿ, ಭಾರತವು ಮುಂದಿನ ದಿನಗಳಲ್ಲಿ ತನ್ನ ಆರ್ಥಿಕ ತೊಡಗಿಸಿಕೊಳ್ಳುವಿಕೆಗೆ ಮುಂದಾಗಿದೆ.

ಲೇಖನ : ಸತ್ಯಜಿತ್‌ ಮೊಹಂತಿ, ಐ.ಆರ್.ಎಸ್.‌ ಹಿರಿಯ ವಿಶ್ಲೇಷಕರು