ಬ್ರೆಕ್ಸಿಟ್, ಯುರೋಪಿಯನ್ ಯೂನಿಯನ್ ಮತ್ತು ಭಾರತದ ಮೇಲಿನ ಅದರ ಪರಿಣಾಮ

‘ಬ್ರೆಕ್ಸಿಟ್’ ಒಕ್ಕೂಟದಿಂದ ಹೊರಹೋಗುವ 2016ರ ಜನಾಭಿಪ್ರಾಯಕ್ಕೆ ಬ್ರಿಟನ್ ಅನುಮೋದನೆ ನೀಡಿದ ಬಳಿಕ ಯುಕೆ ಮತ್ತು ಯುರೋಪಿಯನ್ ಯೂನಿಯನ್ (ಇಯು) ನಡುವಿನ 47 ವರ್ಷಗಳ ಸಂಬಂಧ 2020ರ ಜನವರಿ 31ರಂದು ಕೊನೆಗೊಂಡಿತು. 1973ರಲ್ಲಿ ಯುರೋಪಿಯನ್ ಆರ್ಥಿಕ ಸಮುದಾಯಕ್ಕೆ ಸೇರಿದ್ದ ಬ್ರಿಟನ್, ದೇಶಗಳು ಹೇಗೆ ಹೊರಹೋಗಬಹುದು ಎಂಬುದನ್ನು ತಿಳಿಸುವ ಲಿಸ್ಬನ್ ಒಪ್ಪಂದದ 50ನೇ ವಿಧಿ ಅನ್ವಯ ಇಯುನಿಂದ ಹಿಂದೆ ಸರಿದ ಮೊದಲ ಸದಸ್ಯ ರಾಷ್ಟ್ರವಾಗಿದೆ.

ಬ್ರೆಕ್ಸಿಟ್ ಪರಿಣಾಮಗಳನ್ನು ಯುಕೆ ಮತ್ತು ಇಯು ಎರಡೂ ವಿಭಿನ್ನ ರೀತಿಯಲ್ಲಿ ಅನುಭವಿಸುತ್ತಿವೆ. ಬ್ರೆಕ್ಸಿಟ್ ಬೆಂಬಲಿಗರಿಗೆ ಇದು ‘ಜಾಗತಿಕ ಬ್ರಿಟನ್’ಗಾಗಿ ದೇಶವನ್ನು ಬಲಪಡಿಸುವ ಮತ್ತು ಬ್ರಸೆಲ್ಸ್ ನಿಂದ ರಾಷ್ಟ್ರೀಯ ಅಧಿಕಾರವನ್ನು ಪುನಃ ಪಡೆದುಕೊಳ್ಳುವ ಅಂಶವಾಗಿದೆ. ಎಷ್ಟೇಯಾದರೂ ಇದು ಸುಲಭದ ತುತ್ತಲ್ಲ.‌‌ ಬ್ರಿಟನ್ ಈಗ ಹೊಸ ವ್ಯಾಪಾರ ಒಪ್ಪಂದಗಳಿಗೆ ಮತ್ತು ಮಾರುಕಟ್ಟೆಗಳ ಪ್ರವೇಶಕ್ಕೆ ಎಲ್ಲಾ ದೇಶಗಳೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ. ಹಣಕಾಸು ಸೇವೆಗಳು ಮತ್ತು ಹಣಕಾಸು ಮಾರುಕಟ್ಟೆಗಳ ದೊಡ್ಡ ವಲಯಗಳ ಮೇಲಷ್ಟೇಯಲ್ಲದೆ ಬ್ರಿಟನ್ ಇಯುನಿಂದ ದೂರವಾಗಿರುವುದು ಕಾರ್ಮಿಕ ಮತ್ತು ಬಂಡವಾಳ ಸೇವೆಗಳ ಹರಿವಿನ ಮೇಲೂ ಪರಿಣಾಮ ಬೀರುತ್ತದೆ. ಅಲ್ಲದೆ ಇಯು ತನ್ನ ಅತಿದೊಡ್ಡ ರಫ್ತು ಮತ್ತು ಆಮದು ಮಾರುಕಟ್ಟೆಯಾಗಿರುವುದರಿಂದ ಬ್ರೆಕ್ಸಿಟ್ ಹೊಸ ಒಪ್ಪಂದದ ಅಗತ್ಯವಿರುವ ಪ್ರಮುಖ ವ್ಯಾಪಾರ ಸಮಸ್ಯೆಗಳನ್ನು ಸೃಷ್ಟಿಸಿದೆ. ಇಲ್ಲದಿದ್ದರೆ ತೆರಿಗೆಗಳು ಮತ್ತು ಕೋಟಾಗಳು ಬಂದು ಎರಡೂ ಕಡೆಯ ವ್ಯವಹಾರಕ್ಕೆ ಧಕ್ಕೆ ಉಂಟಾಗುತ್ತದೆ.

ಬ್ರೆಕ್ಸಿಟ್ ಇಯುಗಾಗಿ ತನ್ನದೇ ಆದ ಸಾಮೂಹಿಕ ಶಕ್ತಿಯನ್ನು ಅನೇಕ ವಿಧಗಳಲ್ಲಿ ಧಾರೆ ಎರೆದಿದೆ. ಇಯುನ ಸಾಮಾನ್ಯ ಬಜೆಟ್ ಗೆ ಬ್ರಿಟನ್ ಎರಡನೇ ಅತಿದೊಡ್ಡ ಕೊಡುಗೆ ನೀಡಿತ್ತು ಮತ್ತು ಯುಎನ್ಎಸ್ಸಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಖಾಯಂ ಸದಸ್ಯ ರಾಷ್ಟ್ರಗಳಲ್ಲಿ ಒಂದಾಗಿತ್ತು.‌ ಹೀಗಾಗಿ ಯುರೋಪಿಯನ್ ಯೂನಿಯನ್ ಬಜೆಟ್ ಮೊತ್ತ ಕಡಿಮೆಯಾಗುವುದು ಮಾತ್ರವಲ್ಲದೆ ಸಾಮಾನ್ಯ ವಿದೇಶಿ ಮತ್ತು ಭದ್ರತಾ ನೀತಿಯ ಮಟ್ಟದಲ್ಲಿ ಬ್ರಿಟನ್ ಅನುಪಸ್ಥಿತಿಯನ್ನು ತೀವ್ರವಾಗಿ ಎದುರಿಸಬೇಕಾಗುತ್ತದೆ. ಇದರಿಂದ ಎಲ್ಲಾ ಇಯು ಸಂಸ್ಥೆಗಳಿಂದ ಯೂನಿಯನ್ ಜ್ಯಾಕ್  ತೆಗೆದುಹಾಕಿದಂತಾಗಿದೆ, ಅಂದರೆ ಎಲ್ಲಾ ನಿರ್ಧಾರ ತೆಗೆದುಕೊಳ್ಳುವ ಸ್ಥಳಗಳ ಸಂಖ್ಯೆ ಕಡಿಮೆ ಆಗಿದೆ. ಅಂತಿಮವಾಗಿ ಬ್ರೆಕ್ಸಿಟ್‌ ಕತ್ತಲೆ ಮತ್ತು ವಿನಾಶದತ್ತ ಸಾಗಿದ್ದು, ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಅವರು “ಈ ಮಾರ್ಗದಿಂದ ಎಂದಿಗೂ ನಮ್ಮ ಗುರಿಗಳನ್ನು ಬೇರೆ ಮಾಡಲು ಸಾಧ್ಯವಾಗಲಿಲ್ಲ; ಅದೇ ರೀತಿ ಬ್ರೆಕ್ಸಿಟ್ ಕೂಡ ಹಾಗೆ ಮಾಡುವುದಿಲ್ಲ” ಎಂದಿದ್ದಾರೆ.

ಬ್ರೆಕ್ಸಿಟ್ ಸಂಭವಿಸಿದರೂ 2020ರ ಡಿಸೆಂಬರ್ 31ಕ್ಕೆ ಅದರ ಅವಧಿ ಅಂತ್ಯಗೊಳ್ಳುತ್ತಿದೆ. ಇದು ಎಲ್ಲಾ ಪ್ರಕ್ರಿಯೆಗಳನ್ನು ಸರಾಗಗೊಳಿಸುವ ಮತ್ತು ವ್ಯಾಪಾರ ಮತ್ತು ಮಾರುಕಟ್ಟೆ ಪ್ರವೇಶದ ವಿಷಯಗಳ ಬಗ್ಗೆ ಮಾತುಕತೆ ನಡೆಸಲು ತೆಗೆದುಕೊಳ್ಳಬೇಕಾದ ಕಠಿಣ ನಿರ್ಧಾರವಾಗಲಿದೆ. ಇಯು ನಿಯಮಗಳಿಗೆ ಯಾವುದೇ ಹೊಂದಾಣಿಕೆ ಇರುವುದಿಲ್ಲ ಮತ್ತು ವಿವಾದಗಳನ್ನು ಪರಿಹರಿಸಲು ಇದು ಯುರೋಪಿಯನ್ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಗೂ ಬರುವುದಿಲ್ಲ ಎಂದು ಈಗಾಗಲೇ ಬ್ರಿಟನ್ ಸ್ಪಷ್ಟಪಡಿಸಿದೆ.

ಈ ಹಿನ್ನೆಲೆಯಲ್ಲಿ ಭಾರತ- ಯುಕೆ ಸಂಬಂಧಗಳು ಮತ್ತೊಂದು ಆಯಾಮ ತೆರೆದುಕೊಳ್ಳುತ್ತವೆ. ಬ್ರಿಟನ್ ವ್ಯಾಪಾರ ಸಂಬಂಧಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವುದರಿಂದ ವ್ಯಾಪಾರ ಹಾಗೂ ಆರ್ಥಿಕ ಸಹಭಾಗಿತ್ವದ ಕುರಿತು ಭಾರತವು ಲಂಡನ್ನೊಂದಿಗೆ ಮಾತುಕತೆ ನಡೆಸಲು ಹೊಸ ಅವಕಾಶವನ್ನು ಒದಗಿಸುತ್ತದೆ. ಭಾರತೀಯ ಮೂಲದ ಪ್ರಮುಖ ಬ್ರಿಟಿಷ್ ಉದ್ಯಮಿ ಲಾರ್ಡ್ ಕರಣ್ ಬಿಲ್ಲಿಮೋರಿಯಾ ಅವರ ಪ್ರಕಾರ ಬ್ರೆಕ್ಸಿಟ್ ಲಾಭ ಪಡೆಯಲು ನವದೆಹಲಿಯು ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡುವ, ಡೇಟಾ ಗೌಪ್ಯತೆ ಸಮಸ್ಯೆಗಳನ್ನು ಪರಿಹರಿಸುವ ಹಾಗೂ ವ್ಯವಹಾರವನ್ನು ಸುಲಭಗೊಳಿಸುವ ಸುಧಾರಣೆಗಳನ್ನು ತೆಗೆದುಕೊಳ್ಳಬೇಕು. ನವೀಕೃತ ಭಾರತ-ಯುಕೆ ಸಹಭಾಗಿತ್ವದಿಂದ ಸಕಾರಾತ್ಮಕ ಬೆಳವಣಿಗೆಯನ್ನು ಕಾಣಬಹುದಾದ ತಂತ್ರಜ್ಞಾನ, ಹಣಕಾಸು‌ ಸೇವೆ, ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳು ಪ್ರಯೋಜನ ಪಡೆಯುತ್ತವೆ. ರಾಜಕೀಯ ಮಟ್ಟದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಈಗಾಗಲೇ ಭಾರತವನ್ನು ಹೊಸ ಪಾಲುದಾರಿಕೆಯಲ್ಲಿ ತೊಡಗಿಸಿಕೊಳ್ಳುವ ಉತ್ಸಾಹ ತೋರಿದ್ದಾರೆ. ಯುಕೆಯಲ್ಲಿರುವ ಭಾರತೀಯ ವ್ಯವಹಾರಕ್ಕಾಗಿ ಉಳಿದ ಇಯುಗಳಿಗೆ ಉಚಿತ ಪ್ರವೇಶ ಈಗ ಮುಗಿದಿದ್ದು ಇದರಿಂದಾಗಿ ಸ್ಥಳಾಂತರ ಅಥವಾ ರಫ್ತು ತೆರಿಗೆ ಪಾವತಿಸುವ ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾಗಿದೆ. ಆದ್ದರಿಂದ ಅನೇಕ ಭಾರತೀಯ ವ್ಯವಹಾರಗಳು ಇಯುಗೆ ಮಾರುಕಟ್ಟೆ ಪ್ರವೇಶವನ್ನು ಕಳೆದುಕೊಳ್ಳುತ್ತವೆ, ಯುಕೆಯಲ್ಲಿ ಮಾರುಕಟ್ಟೆ ಹಿಂಜರಿತವನ್ನು ಎದುರಿಸುತ್ತವೆ ಹಾಗೂ ತೆರಿಗೆರಹಿತ ಅಡೆತಡೆಗಳನ್ನು ಎದುರಿಸಬೇಕಾಗಿರುವುದರಿಂದ ವ್ಯಾಪಾರ ಮತ್ತು ವ್ಯವಹಾರದಲ್ಲಿ ಎರಡೂ ಬದಿಗಳಿಗೆ ಆದ್ಯತೆಗಳನ್ನು ಒಗ್ಗೂಡಿಸುವುದು ಬಹಳ ಮುಖ್ಯವಾದ ವಿಷಯವಾಗಿದೆ.

ರಾಜಕೀಯ ಮಟ್ಟದಲ್ಲಿ ಬ್ರಿಟನ್ ಕಾಮನ್ವೆಲ್ತ್ ನಂತಹ ಇತರೆ ವೇದಿಕೆಗಳ ಮೂಲಕ ಸಂಬಂಧವನ್ನು ಗಟ್ಟಿಪಡಿಸಲು ಪ್ರಯತ್ನಿಸುತ್ತಿರುವುದು ನವದೆಹಲಿಗೆ ಉಪಯುಕ್ತವಾಗಿದೆ. ಅದಕ್ಕಿಂತ ಮುಖ್ಯವಾಗಿ ಸೇವಾ ವಲಯದಲ್ಲಿ ವ್ಯಾಪಾರ ಮತ್ತು ಮಾರುಕಟ್ಟೆ ಪ್ರವೇಶ ಹಾಗೂ ಕಾರ್ಮಿಕ ಸಂಬಂಧಿತ ವಿಷಯಗಳ ಉತ್ತಮ ನಿಯಮಗಳನ್ನು ಕಂಡುಹಿಡಿಯಲು ಭಾರತ ಪ್ರಯತ್ನಿಸಬೇಕಾಗಿದೆ‌. 2020ರ ಅಂತ್ಯದವರೆಗೆ ಬ್ರಿಟನ್ ಇಯು ಜೊತೆಗಿನ ಮಾತುಕತೆಯು ಮುಕ್ತಾಯ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಭಾರತೀಯ ಸರ್ಕಾರವು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಬೇಕು ಮತ್ತು ಯುಕೆ ಜೊತೆಗಿನ ಪಾಲುದಾರಿಕೆಯನ್ನು ಮರುಹೊಂದಿಸಲು ವಿಭಿನ್ನ ತಂತ್ರಗಳೊಂದಿಗೆ ಅಣಿಯಾಗಬೇಕು.

ಸ್ಕ್ರಿಪ್ಟ್: ಪ್ರೊ. ಉಮ್ಮು ಸಲ್ಮಾ ಬಾವಾ, ಪ್ರೊಫೆಸರ್ ಮತ್ತು ಜೀನ್ ಮೊನೆಟ್ ಚೇರ್, ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್, ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ