ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಅವರು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಇತ್ತೀಚೆಗೆ ಕೈಗೊಂಡ ಎಲ್ಲಾ ಕ್ರಮಗಳ ಹೊರತಾಗಿಯೂ ಈ ಪ್ರದೇಶದ ಪರಿಸ್ಥಿತಿ ಸರಿಯಾಗಿಲ್ಲ ಎಂಬುದು ಕಳವಳಕಾರಿ ವಿಷಯ” ಎಂದು ಹೇಳಿದ್ದರು. ಯುಎನ್ ನಿರ್ಣಯಗಳ ಆಧಾರದ ಮೇಲೆ ಮತ್ತು ಕಾಶ್ಮೀರಿ ಜನರ ನಿರೀಕ್ಷೆಗಳಿಗೆ ಅನುಗುಣವಾಗಿ ಪಾಕಿಸ್ತಾನ ಮತ್ತು ಭಾರತದ ನಡುವಿನ ಬಿಕ್ಕಟ್ಟನ್ನು ಹಾಗೂ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಟರ್ಕಿ ಒಲವು ತೋರಿದೆ. ಅವರು ಕಾಶ್ಮೀರದೊಂದಿಗೆ ಟರ್ಕಿಯ “ಒಗ್ಗಟ್ಟನ್ನು” ಹೊರಹಾಕಿದರು ಮತ್ತು ಕಾಶ್ಮೀರಿ ಜನರ “ಹೋರಾಟ” ವನ್ನು ಮೊದಲನೆಯ ಮಹಾಯುದ್ಧದ ಸಮಯದಲ್ಲಿ ವಿದೇಶಿ ಪ್ರಾಬಲ್ಯದ ವಿರುದ್ಧ ಟರ್ಕಿಯ ಹೋರಾಟದೊಂದಿಗೆ ಹೋಲಿಸಿದ್ದಾರೆ.
ಎರ್ಡೊಗನ್ ಅವರ ಅಭಿಪ್ರಾಯದ ಬಗ್ಗೆ ಭಾರತ ಕಟುವಾದ ಪ್ರತಿಕ್ರಿಯೆ ನೀಡಿದೆ. ಟರ್ಕಿಯ ಅಧ್ಯಕ್ಷರ ಹೇಳಿಕೆಗಳು ಇತಿಹಾಸದ ತಿಳುವಳಿಕೆ ಅಥವಾ ರಾಜತಾಂತ್ರಿಕತೆಯ ನಡವಳಿಕೆಯನ್ನು ಪ್ರತಿಬಿಂಬಿಸುವುದಿಲ್ಲ ಮತ್ತು ಟರ್ಕಿಯೊಂದಿಗಿನ ಭಾರತದ ಸಂಬಂಧಗಳ ಮೇಲೆ ಅವು ಬಲವಾದ ಪರಿಣಾಮಗಳನ್ನು ಬೀರುತ್ತವೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇತ್ತೀಚಿನ ಈ ಪ್ರಸಂಗವು ಇತರ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ಟರ್ಕಿಯ ಹಸ್ತಕ್ಷೇಪಕ್ಕೆ ಒಂದು ಉದಾಹರಣೆಯಾಗಿದೆ ಎಂಬ ಹೇಳಿಕೆಯನ್ನು ಭಾರತ ಕೊಟ್ಟಿದೆ. ಟರ್ಕಿ ಅಧ್ಯಕ್ಷರ ಹೇಳಿಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದಿದೆ. ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಸಮರ್ಥಿಸಲು ಟರ್ಕಿಯ ಪುನರಾವರ್ತಿತ ಪ್ರಯತ್ನಗಳನ್ನು ನವದೆಹಲಿ ತಿರಸ್ಕರಿಸುತ್ತದೆ. ಕಾಶ್ಮೀರವು ಭಾರತದ ಅವಿಭಾಜ್ಯ ಮತ್ತು ಅಳಿಸಲಾಗದ ಭಾಗವಾಗಿದೆ ಎಂದು ಭಾರತ ಪ್ರತಿಪಾದಿಸಿದೆ. ಆದ್ದರಿಂದ ಹೊರಗಿನ ಯಾವುದೇ ಹಸ್ತಕ್ಷೇಪವನ್ನು ಪ್ರಶಂಸಿಸಲಾಗುವುದಿಲ್ಲ.
ಕಳೆದ ವರ್ಷ, ಜಮ್ಮು ಮತ್ತು ಕಾಶ್ಮೀರದಲ್ಲಿ (ಜೆ & ಕೆ) ಆರ್ಟಿಕಲ್ 370 ನಿಷ್ಕ್ರಿಯಗೊಳಿಸಿದ ಭಾರತದ ಕ್ರಮದ ಬಗ್ಗೆ ಎರ್ಡೋಗನ್ ಟೀಕಿಸಿದ ನಂತರ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಟರ್ಕಿ ಭೇಟಿ ರದ್ದುಪಡಿಸಲಾಯಿತು. ಭಾರತ ಮತ್ತು ಟರ್ಕಿ ನಡುವಿನ ದ್ವಿಪಕ್ಷೀಯ ಸಂಬಂಧವು ಇತ್ತೀಚೆಗೆ ಏರಿಳಿತಗಳನ್ನು ಕಂಡಿದೆ. ಎರ್ಡೊಗನ್ ಕಾಶ್ಮೀರ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವುದು ಇದೇ ಮೊದಲಲ್ಲ. 2019ರ ಯುಎನ್ ಜನರಲ್ ಅಸೆಂಬ್ಲಿ ಸಭೆಯಲ್ಲಿ ಅವರ ಭಾಷಣವು ಭಾರತದಿಂದ ಖಂಡನೆಗೆ ಗುರಿಯಾಯಿತು. ಕಾಶ್ಮೀರ ಸಮಸ್ಯೆಯು ಸಾಕಷ್ಟು ಅಂತರರಾಷ್ಟ್ರೀಯ ಗಮನ ಸೆಳೆದಿಲ್ಲ ಮತ್ತು ಘರ್ಷಣೆಯ ಬದಲು ನ್ಯಾಯ, ಸಮಾನತೆ ಆಧಾರದ ಮೇಲೆ ಸಂವಾದದಿಂದ ಇದನ್ನು ಮೂಲಕ ಪರಿಹರಿಸಬೇಕು ಎಂದು ಅವರು ಹೇಳಿದ್ದರು. ಅವರು ಅಧಿಕಾರಕ್ಕೆ ಬಂದಾಗಿನಿಂದಲೂ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಭಾರತ ಮತ್ತು ಪಾಕಿಸ್ತಾನದ ಮಧ್ಯವರ್ತಿಯಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ ನವದೆಹಲಿ ಅವರ ಆಶಯಗಳನ್ನು ತಿರಸ್ಕರಿಸಿದೆ. ಎರ್ಡೊಗನ್ ತಮ್ಮ ದೇಶದ ಸಮಸ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಟರ್ಕಿಶ್ ಜನರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿರುವ ಬಗ್ಗೆ ಹೆಚ್ಚು ಗಮನ ನೀಡಬೇಕು.
ಕಾಶ್ಮೀರ ದ್ವಿಪಕ್ಷೀಯ ವಿಷಯವಾಗಿದೆ ಮತ್ತು ಭಾರತಕ್ಕೆ ಯಾವುದೇ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಅಗತ್ಯವಿಲ್ಲ ಎಂಬ ಸ್ಥಿರ ನಿಲುವನ್ನು ಭಾರತ ಉಳಿಸಿಕೊಂಡಿದೆ. 370 ನೇ ವಿಧಿಯನ್ನು ಹಿಂತೆಗೆದುಕೊಂಡ ನಂತರ, ಪಾಕಿಸ್ತಾನ ಅಥವಾ ಕಾಶ್ಮೀರದ ವಿಷಯದಲ್ಲಿ ಯಾವುದೇ ಮೂರನೇ ರಾಷ್ಟ್ರದ ಹಸ್ತಕ್ಷೇಪವು ಭಾರತದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪವಾಗಲಿದೆ ಹಾಗೂ ಇದು ವಿಶ್ವಸಂಸ್ಥೆಯ ಕಾನೂನಿನಡಿಯಲ್ಲಿ ಇದು ಕಾನೂನುಬಾಹಿರವಾಗಿದೆ.
ಪಾಕಿಸ್ತಾನಕ್ಕೆ ಟರ್ಕಿಯ ಬೆಂಬಲವನ್ನು ಧಾರ್ಮಿಕ ಕೋನ ಮತ್ತು ಸೈಪ್ರಸ್ ಕೋನ ಎಂಬ ಎರಡು ಅಂಶಗಳಿಂದ ನೋಡಬಹುದು. ಟರ್ಕಿ ಮತ್ತು ಪಾಕಿಸ್ತಾನಗಳು ಧರ್ಮದ ವಿಷಯಗಳಿಂದ ಹೆಚ್ಚು ಆವರಿಸಿಕೊಂಡಿವ. ಇತ್ತೀಚೆಗೆ, ಮಲೇಷ್ಯಾದ ಜೊತೆಗೆ ಎರಡೂ ದೇಶಗಳು ‘ಇಸ್ಲಾಮೋಫೋಬಿಯಾ’ವನ್ನು ಎದುರಿಸಲು ಮತ್ತು ಇಸ್ಲಾಂ ಧರ್ಮದ ಬಗ್ಗೆ‘ ತಪ್ಪು ಗ್ರಹಿಕೆಗಳನ್ನು ’ತೆಗೆದುಹಾಕಲು ಮೀಸಲಾಗಿರುವ ದೂರದರ್ಶನ ಚಾನೆಲ್ ಅನ್ನು ಪ್ರಾರಂಭಿಸಲು ಒಪ್ಪಿಕೊಂಡಿವೆ. ಸೈಪ್ರಸ್ ವಿಷಯದಲ್ಲಿ, ಉತ್ತರ-ಸೈಪ್ರಸ್ ಅನ್ನು ಭಾರತ ಪ್ರತ್ಯೇಕ ಮತ್ತು ಸ್ವತಂತ್ರ ದೇಶವೆಂದು ಗುರುತಿಸುವುದಿಲ್ಲ. ಇದು ನವದೆಹಲಿ ಮತ್ತು ಅಂಕಾರಾ ನಡುವಿನ ಸಮಸ್ಯೆಯಾಗಿ ಉಳಿದಿದೆ. ಗ್ರೀಕ್-ಸೈಪ್ರಸ್‌ನ ಸ್ವಾತಂತ್ರ್ಯ, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸೈಪ್ರಸ್‌ನ ಏಕತೆಯನ್ನು ಭಾರತ ಯಾವಾಗಲೂ ಬೆಂಬಲಿಸುತ್ತದೆ. ಇದು ಗ್ರೀಕ್-ಸೈಪ್ರಸ್ ಅನ್ನು ದ್ವೀಪದ ಕಾನೂನುಬದ್ಧ ಸರ್ಕಾರವೆಂದು ಗುರುತಿಸುತ್ತದೆ. ಪಾಕಿಸ್ತಾನದ ನಿಲುವು ಭಾರತದ ನಿಲುವಿಗೆ ವಿರುದ್ಧವಾಗಿದೆ. ಇದಲ್ಲದೆ, ನವದೆಹಲಿಯು ಅರ್ಮೇನಿಯಾ ಮತ್ತು ಗ್ರೀಸ್‌ನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಆದರೆ ಐತಿಹಾಸಿಕ ಸಮಸ್ಯೆಗಳಿಂದಾಗಿ ಅಂಕಾರಾ ಉದ್ವಿಗ್ನ ಸಂಬಂಧವನ್ನು ಹೊಂದಿದೆ.
ಈ ಸಮಸ್ಯೆಗಳ ಹೊರತಾಗಿಯೂ, ಭಾರತವು ದ್ವಿಪಕ್ಷೀಯ ಸಂಬಂಧವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ವಾಸ್ತವವಾಗಿ, 2019ರ ಜೂನ್‌ನಲ್ಲಿ ಪ್ರಧಾನಿ ಮೋದಿ ಅವರು ‘ಭಾರತವು ಟರ್ಕಿಯನ್ನು ಮೌಲ್ಯಯುತ ಸ್ನೇಹಿತ ಎಂದು ಪರಿಗಣಿಸುತ್ತದೆ, ಅವರೊಂದಿಗೆ ನಮ್ಮ ಸಂಬಂಧಗಳನ್ನು ಪರೀಕ್ಷಿಸಲಾಗುತ್ತದೆ’ ಎಂದು ಟ್ವೀಟ್ ಮಾಡಿದ್ದರು. ಆದರೆ, ಅಂಕಾರಾ ನಿರಂತರವಾಗಿ ಕಾಶ್ಮೀರ ಸಮಸ್ಯೆಯನ್ನು ಹೆಚ್ಚಿಸುತ್ತಿರುವುದು ದ್ವಿಪಕ್ಷೀಯ ಸಂಬಂಧಗಳಿಗೆ ಅಡ್ಡಿಯಾಗುತ್ತಿದೆ. ಭಯೋತ್ಪಾದನೆ ಕುರಿತ ತನ್ನ ನಿಲುವಿನ ಬಗ್ಗೆ ಭಾರತ ಸ್ಪಷ್ಟವಾಗಿದೆ. ಆದ್ದರಿಂದ, ಬಲವಾದ ಧಾರ್ಮಿಕ ಸಂಬಂಧಗಳಿದ್ದರೂ ಇತರರು ಸಹ ರಾಜತಾಂತ್ರಿಕ ತತ್ವವನ್ನು ಅನುಸರಿಸಬೇಕೆಂದು ನವದೆಹಲಿ ನಿರೀಕ್ಷಿಸುತ್ತದೆ. ಇಲ್ಲಿ ಮಾನವೀಯತೆಯೇ ಮುಖ್ಯ. ಧರ್ಮವಲ್ಲ.
ಲೇಖನ ಡಾ. ಇಂದ್ರಾಣಿ ತಾಲೂಕ್ ದಾರ್, ಸಿಐಎಸ್ ಮತ್ತು ಟರ್ಕಿ ಕುರಿತ ವಿಶ್ಲೇಷಕರು