ಭಾರತ ಮತ್ತು ಬಾಂಗ್ಲಾದೇಶ: ದ್ವಿಪಕ್ಷೀಯ ಸಂಬಂಧಗಳ ವರ್ಧನೆ

ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರೀಂಗ್ಲಾ ಅವರ ಡಾಕಾ ಭೇಟಿಯು,  ಭಾರತವು ಬಾಂಗ್ಲಾದೇಶದೊಂದಿಗೆ ಹಂಚಿಕೊಂಡಿರುವ ನಿಕಟ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಬಾಂಗ್ಲಾದೇಶದ ಪ್ರಸ್ತುತ ಅವಾಮಿ ಲೀಗ್ ಸರ್ಕಾರದ ಅಡಿಯಲ್ಲಿ,  ದ್ವಿಪಕ್ಷೀಯ ಸಂಬಂಧವು ವಿಶೇಷವಾದ ಉತ್ತೇಜನವನ್ನು ಪಡೆದಿದೆ. ಶ್ರೀ ಶ್ರಿಂಗ್ಲಾ ಅವರ ಭೇಟಿ ಮಹತ್ವದ್ದಾಗಿದೆ. ಏಕೆಂದರೆ 2019ರ ಜನವರಿವರೆಗೂ ಡಾಕಾದಲ್ಲಿ ಬಾಂಗ್ಲಾದೇಶದ ಭಾರತದ ಹೈಕಮಿಷನರ್ ಆಗಿ ಸೇವೆ ಸಲ್ಲಿಸಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಮುಂದೆ ಕೊಂಡೊಯ್ಯುವಲ್ಲಿ ಅವರು  ಪ್ರಮುಖ ಪಾತ್ರ ವಹಿಸಿದ್ದಾರೆ. ಇದಲ್ಲದೆ, ಇತ್ತೀಚಿನ ದಿನಗಳಲ್ಲಿ, ಭಾರತದಲ್ಲಿನ ಆಂತರೀಕಾ ಬೆಳವಣಿಗೆಗಳ ಬಗ್ಗೆ ಡಾಕಾ ಕಳವಳಗೊಂಡು, ಅದು ತನ್ನ ನೆಲದ ಮೇಲೆ ಪ್ರಭಾವ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದೆ. ಆದರೆ, ಭಾರತದ ಬೆಳವಣಿಗೆಗಳು ಬಾಂಗ್ಲಾದೇಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಡಾಕಗೆ ಭರವಸೆ ನೀಡಿದ್ದು,  ಡಾಕಾಗೆ ಅಧಿಕೃತ ಮಟ್ಟದಲ್ಲಿ ಇದನ್ನು ವಿವರಿಸಲಾಗಿದೆ.

 ಬಂಗಬಂಧು ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವದಲ್ಲಿ ಭಾಗವಹಿಸಲು ಈ ತಿಂಗಳ ಮಧ್ಯದಲ್ಲಿ ಪ್ರಧಾನಿ ಮೋದಿಯವರು ನೀಡುತ್ತಿರುವ  ಭೇಟಿಗೆ ವೇದಿಕೆ ಸಿದ್ಧಪಡಿಸುವುದು ವಿದೇಶಾಂಗ ಕಾರ್ಯದರ್ಶಿಯ ಭೇಟಿಯ ಮುಖ್ಯ ಕಾರಣವಾಗಿದೆ. ಶೇಖ್ ಮುಜಿಬುರ್ ರಹಮಾನ್ ಕೂಡ ನಮ್ಮ ರಾಷ್ಟ್ರೀಯ ನಾಯಕ ಎಂದು ಪ್ರಧಾನಿ ಮೋದಿ ಅವರು ಹೇಳಿದ್ದಾರೆ. ಮುಂಬರುವ ವಾರಗಳಲ್ಲಿ  ಉಭಯ ದೇಶಗಳು ಇನ್ನೂ ಹಲವಾರು ವಿಷಯಗಳನ್ನು ಚರ್ಚಿಸಲಿವೆ.

ಪರಸ್ಪರ ಆತಂಕಗಳನ್ನು ಪರಿಹರಿಸಲು ಉಭಯ ದೇಶಗಳು ಕೈಗೊಂಡ ಹಲವಾರು ಕ್ರಮಗಳು ಉತ್ತೇಜತವಾಗಿದ್ದು. ಕಳೆದ ಕೆಲವು ವರ್ಷಗಳಲ್ಲಿ ಡಾಕಾ ಮತ್ತು ದೆಹಲಿ ನಡುವಿನ ಸಂಬಂಧಗಳು ಎತ್ತರಕ್ಕೆ  ಏರಿದೆ. ಮಹತ್ತರ ಭೂಗಡಿ ಒಪ್ಪಂದ ಮತ್ತು ಅಂತರರಾಷ್ಟ್ರೀಯ ಮಧ್ಯಸ್ಥಿಕೆಯ ಮೂಲಕ ಕಡಲ ಗಡಿಯ ಇತ್ಯರ್ಥ, ಈ ವಿಷಯಗಳ ಕುರಿತು ಭಾರತದ ನಡೆಯ ಮೇಲಿನ ದೂರುಗಳಿಗೆ ಇತಿಶ್ರೀ ಹಾಡಲಾಗಿದೆ.    ಗಡಿರೇಖೆಯ ಒಪ್ಪಂದದಿಂದ ಗಡಿಗಳ ಗಸ್ತು ಕ್ರಿಯೆ ಸುಧಾರಿಸಿದೆ ಮತ್ತು 2001ರಲ್ಲಿ ಪಿರ್ಡಿವಾ ಘಟನೆಯಲ್ಲಿ ಭುಗಿಲೆದ್ದಂತಹ ಗಡಿ ಸಂಘರ್ಷಗಳನ್ನು ಕಡಿಮೆ ಮಾಡಿದೆ. ಆದರೂ, ಕೆಲವೊಮ್ಮೆ ನಡೆಯುವ  ಗಡಿಯಲ್ಲಿನ ಗುಂಡಿನ ಚಕಮಕಿಯು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರತಿಬಿಂಬಿಸುತ್ತಿದ್ದು, ಅದು ಗಡಿಗಳ ರಕ್ಷಣೆಯನ್ನು ಕಷ್ಟಕರವಾಗಿಸಿದೆ.

2011ರಲ್ಲಿ,   61 ವಸ್ತುಗಳಿಗೆ, ಪ್ರಮುಖವಾಗಿ ಜವಳಿ ವಸ್ತುಗಳು,  ಸುಂಕ ಮುಕ್ತ ಪ್ರವೇಶವನ್ನು ನವದೆಹಲಿಯು ವಿಸ್ತರಿಸಿದ್ದರಿಂದ,  ದ್ವಿಪಕ್ಷೀಯ ವ್ಯಾಪಾರವು ಏರಿಕೆಯಾಗಿದೆ. ರಫ್ತು ಉತ್ತೇಜನ ಬ್ಯೂರೋ (EPB) ದತ್ತಾಂಶದ ಪ್ರಕಾರ, ಭಾರತಕ್ಕೆ ಬಾಂಗ್ಲಾದೇಶದ ರಫ್ತು, ಹಿಂದಿನ ಹಣಕಾಸು ವರ್ಷದಲ್ಲಿ 873.27 ಮಿಲಿಯನ್  ಡಾಲರ್ ಇದ್ದಿದ್ದು, 1.25 ಬಿಲಿಯನ್ ಡಾಲರ್ ಮುಟ್ಟಿ, 42.91% ರಷ್ಟು ಏರಿಕೆಯಾಗಿದ್ದು, ಡಾಕ ರಫ್ತು ಈ ಅವಧಿಯಲ್ಲಿ ಹೇಗೆ ಬೆಳೆದಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಬಾಂಗ್ಲಾದೇಶವು ವಾರ್ಷಿಕ ಶೇಕಡಾ 7ಕ್ಕಿಂತ ಹೆಚ್ಚಾಗಿ  ಬೆಳೆಯುತ್ತಿರುವುದರಿಂದ, ದ್ವಿಪಕ್ಷೀಯ ವ್ಯಾಪಾರವು ಮತ್ತಷ್ಟು ಉತ್ತೇಜನವನ್ನು ಪಡೆಯುತ್ತದೆ. ಆದಾಗ್ಯೂ, ಸುಂಕ ರಹಿತ ಅಡೆತಡೆಗಳು ಪ್ರಮುಖ ಅಡಚಣೆಗಳಾಗಿವೆ. ಅನುಷ್ಠಾನಗೊಳ್ಳುತ್ತಿರುವ ಸಂಪರ್ಕ ಮತ್ತು ಮೂಲಸೌಕರ್ಯ ಯೋಜನೆಗಳು ಮತ್ತು ಉದ್ದೇಶಿತ ಬಾಂಗ್ಲಾದೇಶ ಭೂತಾನ್ ಇಂಡಿಯಾ ನೇಪಾಳ (BBAN) ಮೋಟಾರು ವಾಹನಗಳ ಕಾಯ್ದೆ (MVA) ಮತ್ತು BIMSTEC MVA ಇವುಗಳಿಂದಾಗಿ ,  ದ್ವಿಪಕ್ಷೀಯ ವ್ಯಾಪಾರವು ಹೊಸ ಗರಿಷ್ಠ ಮಟ್ಟವನ್ನು ಮುಟ್ಟುವ ಸಾಧ್ಯತೆಯಿದೆ. ವ್ಯಾಪಾರ ಮತ್ತು ವಾಣಿಜ್ಯದಲ್ಲಿ, ಇಂಧನ-ವ್ಯಾಪಾರ ಮತ್ತು ಜಲಮಾರ್ಗಗಳ ಮೂಲಕ ಸುಧಾರಿತ ಸಂಚರಣೆಗಳು ಮಹತ್ವದ ಪಾತ್ರ ವಹಿಸಲಿದೆ.

ಈ ತಿಂಗಳ ಅಂತ್ಯದ ಪ್ರಧಾನಿ ಮೋದಿಯವರ  ಡಾಕ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ  ರಕ್ಷಣಾ ಸಹಕಾರದ ವಿಷಯ ಚರ್ಚಗೆ ಬರಬಹುದು. ಭಾರತವು 500 ಮಿಲಿಯನ್ ಡಾಲರ್ ರಕ್ಷಣಾ ಸಾಲವನ್ನು ವಿಸ್ತರಿಸಿದ್ದರೂ, ಉಭಯ ದೇಶಗಳು ಇನ್ನೂ ಅದನ್ನು  ಅನುಷ್ಠಾನಗೊಳಿಸಲು ಮಾತುಕತೆ ನಡೆಸುತ್ತಿವೆ. 

 ಬಹುಶಃ ಈ ಕ್ರೆಡಿಟ್ ಲೈನ್ ನ    ಕಾರ್ಯಗತದ ವೇಗ ವರ್ಧಿಸಲೂ ಸಮಯ ಬಂದಿದೆ. 2019ರಲ್ಲಿ ಕರಾವಳಿ ಕಣ್ಗಾವಲು ವ್ಯವಸ್ಥೆಯನ್ನು ಸ್ಥಾಪಿಸಲು  ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದ್ದವು. ಭೇಟಿಯ ಸಮಯದಲ್ಲಿ, ಈ ಕುರಿತು ಹೆಚ್ಚಿನ ಚರ್ಚೆಗಳು ನಡೆಯಬಹುದು. ಸಾಮಾನ್ಯ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲು,  ಈಗಾಗಲೇ ‘ಸಂಪ್ರಿಟಿ’ ಸರಣಿಯ ಭಯೋತ್ಪಾದನಾ-ವಿರೋಧಿ ವ್ಯಾಯಾಮಗಳು ಮತ್ತು ಸಂಘಟನೆಯ ಗಸ್ತು ತಿರುಗುವಿಕೆ ಇವುಗಳನ್ನು ಉಭಯ ದೇಶಗಳು ಹೊಂದಿವೆ.

7.5 ಬಿಲಿಯನ್ ಡಾಲರ್ ಲೈನ್ ಓಫ್ ಕ್ರೆಡಿಟ್ ಅನ್ನು  ತುರ್ತಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ. ವರದಿಗಳ ಪ್ರಕಾರ, 8 ವರ್ಷಗಳ ಅವಧಿಯ    ವಿಸ್ತರಾದ ನಾಲ್ಕು ಕ್ರೆಡಿಟ್ ಲೈನ್‌ಗಳಲ್ಲಿ, ಕೇವಲ ಶೇಕಡಾ 51ರಷ್ಟು ಮಾತ್ರ ಬಳಸಿಕೊಳ್ಳಲಾಗಿದೆ.  ವಿವಿಧ ಕ್ರೆಡಿಟ್ ಲೈನ್‌ ಅಡಿಯಲ್ಲಿ ಮೀಸಲಿಡಲಾದ 510.12 ಮಿಲಿಯನ್ ಡಾಲರ್ ಪ್ರಮಾಣದ ಮೂರು ರೈಲು ಯೋಜನೆಗಳಲ್ಲಿ,   ಕೇವಲ. 87.70 ಮಿಲಿಯನ್ ಅಷ್ಟನ್ನು ಮಾತ್ರ ಡಿಸೆಂಬರ್ 2019 ರವರೆಗೆ ಬಳಸಲಾಗಿದೆ. ಧನಸಹಾಯಕ್ಕಾಗಿ ಯೋಜನಾ ವರದಿಗಳನ್ನು ತಯಾರಿಸಲು    ನಿಧಾನಗತಿಯಲ್ಲಿ ಡಾಕ ಸಾಗಿದೆ. ಆದ್ದರಿಂದ, ಕೆಲವು ಯೋಜನೆಗಳ ವೆಚ್ಚದ ಹೆಚ್ಚಳಕ್ಕೆ ಕಾರಣವಾಗಿವೆ.

ಹೊಸ ರೈಲುಗಳು ಮತ್ತು ಬಸ್ಸುಗಳ ಪರಿಚಯದೊಂದಿಗೆ  ಕಳೆದ ಕೆಲವು ವರ್ಷಗಳಿಂದ ಜನ-ಜನ ಸಂಪರ್ಕಗಳು ವೃದ್ಧಿಯಾಗಿದೆ. ಪ್ರತ್ಯೇಕ ವೈದ್ಯಕೀಯ ವೀಸಾಗಳ ಪರಿಚಯ ಮತ್ತು ಭಾರತೀಯ ಸರ್ಕಾರದ ‘ನೆರೆಹೊರೆ ಮೊದಲು’ ನೀತಿಯಡಿಯಲ್ಲಿ ವೀಸಾ ನೀಡಲು ಮಾನದಂಡಗಳನ್ನು ಸಡಿಲಿಸಿರುವುದು ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ, ಭಾರತೀಯ ವಿದೇಶಾಂಗ ಕಾರ್ಯದರ್ಶಿಯ ಭೇಟಿಯು ಉನ್ನತ ಮಟ್ಟದ ಉಭಯ ದೇಶಗಳ ನಡುವಿನ ಸಂಬಂಧದ     ಮುಂದುವರಿಕೆಯನ್ನು ಸೂಚಿಸುತ್ತದೆ.

ಲೇಖನ: ಡಾ. ಸ್ಮೃತಿ ಎಸ್ ಪಟ್ಟನಾಯಕ್, ದಕ್ಷಿಣ ಏಷ್ಯಾದ ಕಾರ್ಯತಂತ್ರದ ವಿಶ್ಲೇಷಕಿ