ಕಾಬೂಲ್ ವಿಷಯಗಳಲ್ಲಿ ಅನಿಶ್ಚಿತತೆ

ಅಫ್ಘಾನಿ‌ಸ್ತಾನದಲ್ಲಿ ಮಾರ್ಚ್ ಆರಂಭ ಆಗುತ್ತಿದ್ದಂತೆ ಮಹತ್ವದ ಬೆಳವಣಿಗೆಗಳಾಗಿವೆ. ಫೆಬ್ರವರಿ 29ರಂದು ಯುಎಸ್-ತಾಲಿಬಾನ್ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ, ಯುದ್ಧದಿಂದ ಹಾನಿಯಾದ ದೇಶಕ್ಕೆ ಬಹಳ ಅಗತ್ಯವಾಗಿ ಬೇಕಾಗಿರುವ ಶಾಂತಿಯ ಪುನರ್ ಸ್ಥಾಪನೆಗಾಗಿ ಇಂಟ್ರಾ ಅಫ್ಘಾನ್ ಸಂವಾದವನ್ನು ನಡೆಸಲು; ಉಗ್ರಗಾಮಿ ನಿಲುವನ್ನು ಪ್ರತಿನಿಧಿಸುವ ತಾಲಿಬಾನ್ ಮತ್ತು ಶಾಂತಿಪ್ರಿಯ‌ ಜನರ ನಡುವೆ ಸಂವಾದ ಏರ್ಪಾಟಾಗುವಂತೆ ಮಾಡಲು ಅಫ್ಘಾನಿಸ್ತಾನದ ಪ್ರಜಾಸತ್ತಾತ್ಮಕ ಸರ್ಕಾರ ಮುಂದಡಿ ಇಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು.
ಈ ನಡುವೆ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣೆ ಫಲಿತಾಂಶಗಳು ಪ್ರಕಟವಾದ ಬಳಿಕ ಆಳವಾದ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಇದು ಅಫ್ಘಾನಿಸ್ತಾನದ ಜನರಲ್ಲಿ ಮಾತ್ರವಲ್ಲದೆ ಪ್ರಸ್ತುತ ಕಾಬೂಲ್‌ನಲ್ಲಿ ಆಳ್ವಿಕೆ ನಡೆಸುತ್ತಿರುವವರ ರಾಜಕೀಯ ಕಿತ್ತಾಟವನ್ನು ಶಾಂತಯುತವಾಗಿ ಇತ್ಯರ್ಥ ಮಾಡಲು ಪರಿಹಾರ ಹುಡುಕುತ್ತಿರುವ ಬಾಹ್ಯ ಶಕ್ತಿಗಳಿಗೂ ನಿರಾಶೆ ಮೂಡಿಸಿದೆ.
ಕಳೆದ ವರ್ಷದ ಕೊನೆಯಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅಶ್ರಫ್ ಘನಿ ಮತ್ತೆ ಜಯಗಳಿಸಿದ್ದಾರೆ ಎಂದು ಅಫ್ಘಾನಿಸ್ತಾನದ ಚುನಾವಣಾ ಆಯೋಗ ಘೋಷಿಸಿದೆ. ಆದರೂ ಅಶ್ರಫ್ ಘಾನಿ ಅವರನ್ನು ಅಧ್ಯಕ್ಷರನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದು ಡಿ. ಅಬ್ದುಲ್ಲಾ ಅಬ್ದುಲ್ಲಾ ನೇತೃತ್ವದ ಮತ್ತೊಂದು ಪ್ರಬಲ ಬಣದ ವಿರುದ್ಧ ಸ್ಪರ್ಧಿಸಿ ಗೆದ್ದ ಬಳಕವೇ. ಅಶ್ರಫ್ ಘಾನಿ ಎರಡನೇ ಅವಧಿಗೆ ಅಧ್ಯಕ್ಷರಾಗಲು ನಿರಾಕರಿಸಿದ ಸಂದರ್ಭದಲ್ಲೇ ಡಾ. ಅಬ್ದುಲ್ಲಾ ಅಬ್ದುಲ್ಲಾ ಅವರು ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಇದು ಕಾಬೂಲ್‌ನ ಪ್ರಸ್ತುತ ಆಡಳಿತಾತ್ಮಕ ವ್ಯವಸ್ಥೆಯನ್ನು ಮುಜುಗರಕ್ಕೆ ಈಡುಮಾಡಿದೆ. ಅಫ್ಘಾನಿಸ್ತಾನದ ಪ್ರಜಾಸತ್ತಾತ್ಮಕ ಸರ್ಕಾರದ ಒಗ್ಗಟ್ಟಿನ ಬಗ್ಗೆ ಅನುಮಾನಗಳು ಮೂಡುವಂತೆ ಮಾಡಿದೆ. ಪಾಕಿಸ್ತಾನ ಬೆಂಬಲಿತ ತಾಲಿಬಾನ್ ಜೊತೆ ಮಾತುಕತೆ ನಡೆಸುವ ಕೆಲಸವನ್ನೂ ಮಾಡಲಾಗಿದೆ.
ಹಾಲಿ ಅಧ್ಯಕ್ಷ ಅಶ್ರಫ್ ಘನಿ ಅಫ್ಘಾನಿಸ್ತಾನ ಸರ್ಕಾರದ ಮುಖ್ಯ ಕಾರ್ಯನಿರ್ವಾಹಕ ಡಾ. ಅಬ್ದುಲ್ಲಾ ಅಬ್ದುಲ್ಲಾ ಅವರಿಗೆ ಅಧಿಕಾರ ಹಂಚಿಕೆಯ ರಾಜಿ ಸೂತ್ರವನ್ನು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಫ್ಘಾನಿಸ್ತಾನ ಸರ್ಕಾರದ ಎರಡು ಪ್ರಬಲ ಬಣಗಳು ತಾಲಿಬಾನ್ ನಾಯಕರ ಉಗ್ರಗಾಮಿ ಕಾರ್ಯಸೂಚಿಯ ವಿರುದ್ಧ ಹೋರಾಡಲು ಒಗ್ಗೂಡದಿದ್ದರೆ ಅಫ್ಘಾನಿಸ್ತಾನದ ಭವಿಷ್ಯವು ಇದೇ ರೀತಿ ಮುಂದುವರೆಯಲಿದೆ.
ಅಫ್ಘಾನಿಸ್ತಾನದ ಉನ್ನತ ನಾಯಕರ ನಡುವಿನ ಭಿನ್ನಾಭಿಪ್ರಾಯಗಳು ಮಾರ್ಚ್ 10ರಿಂದ ಪ್ರಾರಂಭವಾಗಲಿರುವ ಅಂತರ್-ಅಫ್ಘಾನ್ ಮಾತುಕತೆಗೆ ಅಪಾಯ ಉಂಟುಮಾಡಬಹುದು. ಕಾಬೂಲ್‌ನಲ್ಲಿ ಇರುವ ಪ್ರಜಾಸತ್ತಾತ್ಮಕ ಸರ್ಕಾರವು ಪ್ರಬಲ ಏಕೀಕೃತ ನಿಲುವು ಪ್ರಸ್ತುತಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದ್ದ ಸಮಯದಲ್ಲಿ ಆಳವಾದ ಬಿರುಕುಗಳು ಮೂಡಿರುವುದರಿಂದ ದೇಶದ ಆಡಳಿತವು ದುರ್ಬಲಗೊಳ್ಳುತ್ತಿದೆ. ಅಫ್ಘಾನಿಸ್ತಾನದ ಜನರಿಗೆ ತಮ್ಮದೇ ಸರ್ಕಾರವನ್ನು ನಡೆಸಲು, ತಮ್ಮದೇ ಆದ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಅವಕಾಶ ನೀಡಿದ ಬಳಿಕ ಅಲ್ಲಿ ಪ್ರಜಾಪ್ರಭುತ್ವದ ಸರ್ಕಾರವನ್ನು ಸ್ಥಾಪಿಸಲಾಯಿತು‌. ಪರಿಣಾಮವಾಗಿ ಬೇರೆ ದೇಶಗಳ ಮುಕ್ತ ಸಮಾಜಗಳು ಅನುಭವಿಸಿದ ಸ್ವಾತಂತ್ರ್ಯವನ್ನು ಕಳೆದೆರಡು ವರ್ಷಗಳಲ್ಲಿ ಅಫ್ಘಾನಿಸ್ತಾನದ ಜನರು, ವಿಶೇಷವಾಗಿ ಮಹಿಳೆಯರು ಸವಿಯುತ್ತಿದ್ದಾರೆ.
ಈ ನಡುವೆ 2001ರಲ್ಲಿ ನಡೆದ ಭೀಕರ 9/11 ಭಯೋತ್ಪಾದಕ ದಾಳಿಯ ಬಳಿಕ ಅಧಿಕಾರದಿಂದ ಕೆಳಗಿಳಿಸಲ್ಪಟ್ಟಿದ್ದ ಉಗ್ರಗಾಮಿ ತಾಲಿಬಾನ್ ಸಂಘಟನೆಯು ಪಾಕಿಸ್ತಾನದ ಅಧಿಕಾರಿಗಳ ಬೆಂಬಲದೊಂದಿಗೆ ಮುಂದುವರಿಯಿತು.
ಕಾಬೂಲ್‌ನಲ್ಲಿ ಪ್ರಜಾಸತ್ತಾತ್ಮಕವಾದ ಆಡಳಿತವನ್ನು ರಕ್ಷಣೆ ಮಾಡಲು ಕಳೆದ ಎರಡು ವರ್ಷಗಳಿಂದ ನಿಯೋಜಿಸಲಾಗಿದ್ದ ಯುಎಸ್ ಪಡೆಗಳಿಗೆ ತಾಲೀಬಾನ್ ಸವಾಲಾಗಿ ಪರಿಣಮಿಸಿತ್ತು.
ಫೆಬ್ರವರಿ 29ರ ಯುಎಸ್-ತಾಲಿಬಾನ್ ಒಪ್ಪಂದದ ನಂತರವೂ ಶಾಂತಿ ಮಾತುಕತೆಗಳನ್ನು ನಡೆಸಲು ತಾಲಿಬಾನ್ ಮತ್ತಷ್ಟು ಅಡೆತಡೆಗಳನ್ನು ಎದುರಿಸುತ್ತಿದೆ. ಒಪ್ಪಂದವಾದ ಮರುದಿನ ಭಯೋತ್ಪಾದನೆ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಜೈಲಿನಲ್ಲಿರುವ ತನ್ನ 5,000 ಜನರನ್ನು ಬಿಡುಗಡೆ ಮಾಡಬೇಕೆಂದು ತಾಲಿಬಾನ್ ಕೇಳಿದೆ. ಸ್ವಾಭಾವಿಕವಾಗಿ ಈ ಪ್ರಸ್ತಾಪವನ್ನು ಘನಿ ಸರ್ಕಾರ ನಿರಾಕರಿಸಿತು. ಬಿಡುಗಡೆ ಬೇಡಿಕೆಯನ್ನು ಅಫ್ಘಾನ್ ಸಂವಾದದ ಪ್ರಗತಿಗೆ ಸಂಬಂಧಿಸಬೇಕೆಂದು ಕಾಬೂಲ್ ಬಯಸಿತ್ತು.
ಕಳೆದ ಎರಡು ದಶಕಗಳಲ್ಲಿ ಅಫ್ಘಾನಿಸ್ತಾನ ರಾಷ್ಟ್ರ ಮತ್ತು ಸಮಾಜದ ಪುನರ್ನಿರ್ಮಾಣದಲ್ಲಿ ಭಾರತವು ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿದೆ. ಶಾಂತಿ ಮತ್ತು ಸ್ಥಿರತೆಗೆ ಭರವಸೆ ನೀಡುವ ಹಾಗೂ ಅಫಘಾನ್ ನೇತೃತ್ವದ ಮತ್ತು ಅಫಘಾನ್ ಒಡೆತನದ ಯಾವುದೇ ಪ್ರಕ್ರಿಯೆಗೆ ನವದೆಹಲಿ ಸದಾ ತನ್ನ ಬದ್ಧತೆಯನ್ನು ತೋರಿದೆ. ಅಫ್ಘಾನಿಸ್ತಾನದಲ್ಲಿ ಮುಂದುವರಿದ ಸ್ಥಗಿತದ ಬಗ್ಗೆ ಪ್ರತಿಕ್ರಿಯಿಸಿರುವ ಭಾರತ, ಶಾಂತಿಗಾಗಿ ಅಫ್ಘಾನಿಸ್ತಾನದ ಆಕಾಂಕ್ಷೆಯನ್ನು ಬೆಂಬಲಿಸುವ ಬದ್ಧತೆಯನ್ನು ಸ್ಪಷ್ಟವಾಗಿ ತಿಳಿಸಿದೆ. ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಸಚಿವಾಲಯವು, ಭಾರತ ಮತ್ತು ಅಫ್ಘಾನಿಸ್ತಾನದ ಜನರಿಗೆ ಶಾಂತಿಯುತ, ಪ್ರಜಾಸತ್ತಾತ್ಮಕ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ತಮ್ಮ ಆಕಾಂಕ್ಷೆಗಳನ್ನು ಸಾಕಾರಗೊಳಿಸಲು ಸಾಧ್ಯವಿರುವ ಎಲ್ಲಾ ಬೆಂಬಲವನ್ನು ಮುಂದುವರಿಸಲಿದೆ ಎಂದು ಹೇಳಿದೆ. ಜೊತೆಗೆ ಎಲ್ಲಾ ವರ್ಗಗಳ ಹಿತಾಸಕ್ತಿಯನ್ನೂ ರಕ್ಷಿಸುವ ಬಗ್ಗೆಯೂ ತಿಳಿಸಿದೆ. ಯುದ್ಧದಿಂದ ಹಾನಿಗೊಳಗಾದ ರಾಷ್ಟ್ರವನ್ನು ಪುನರ್ನಿರ್ಮಿಸಲು ಕಳೆದ 18 ವರ್ಷಗಳಲ್ಲಿ ಭಾರತವು 3 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಿದೆ. ತೊಂಬತ್ತರ ದಶಕದ ಆರಂಭದಲ್ಲಿ ಸೋವಿಯತ್ ಪಡೆಗಳು ಅಫ್ಘಾನಿಸ್ತಾನವನ್ನು ತೊರೆದ ಬಳಿಕ ನಾಶವಾಗಿತ್ತು. ದೇಶವನ್ನು ಪುನರ್ನಿರ್ಮಿಸುವಲ್ಲಿ ಭಾರತ ಮಹತ್ವದ ಪಾತ್ರ ನಿರ್ವಹಿಸಿದ್ದಕ್ಕಾಗಿ ಅಫ್ಘಾನಿ‌ಸ್ತಾನದ ಜನರು ಭಾರತವನ್ನು ಬಹುವಾಗಿ ಪ್ರೀತಿಸುತ್ತಾರೆ.
ಸ್ಕ್ರಿಪ್ಟ್: ರಂಜಿತ್ ಕುಮಾರ್, ಹಿರಿಯ ಪತ್ರಕರ್ತ