ಕೊರಿಯನ್ ಪೆನಿನ್ಸುಲಾದಲ್ಲಿ ಹೆಚ್ಚುತ್ತಿರುವ ಒತ್ತಡ

ಉತ್ತರ ಕೊರಿಯಾ ಈ ವಾರದ ಆರಂಭದಲ್ಲಿ ಕನಿಷ್ಠ ಮೂರು ಗುರುತಿಸಲಾಗದ ಸ್ಪೋಟಕಗಳನ್ನು ಹಾರಿಸಿದೆ. ಇದು ಕಳೆದೆರಡು ವಾರದಲ್ಲಿ ಕಿಮ್ ಜೊಂಗ್-ಉನ್ ಆಡಳಿತದ ಎರಡನೇ ಕ್ರಮ. ಪಿಯೋಂಗ್ಯಾಂಗ್ ತನ್ನ ಹಿಂದಿನ ಲೈವ್-ಫೈರ್ ವ್ಯಾಯಾಮಗಳನ್ನು ಖಂಡಿಸಿ “ಮಹತ್ವದ” ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆ ಹಾಕಿದ ಎರಡು ದಿನಗಳ ನಂತರ ಇದು ಘಟಿಸಿದೆ.

ದಕ್ಷಿಣ ಕೊರಿಯಾದ ರಕ್ಷಣಾ ಸಚಿವಾಲಯವು ಉತ್ತರ ಕೊರಿಯಾದ ಪೂರ್ವ ಕರಾವಳಿಯಿಂದ ಕೊರಿಯಾದ ಪರ್ಯಾಯ ದ್ವೀಪ ಮತ್ತು ಜಪಾನ್ ನಡುವಿನ ನೀರಿನಲ್ಲಿ ಹಾರಿಸಿದ ವಿವಿಧ ರೀತಿಯ ಅಲ್ಪ-ಶ್ರೇಣಿಯ ಸ್ಪೋಟಕಗಳನ್ನು ಪತ್ತೆ ಮಾಡಿದೆ ಎಂದು ಹೇಳಲಾಗುತ್ತಿದೆ‌. ಸ್ಪೋಟಕದ ತೀವ್ರತೆ ಗರಿಷ್ಠ 200 ಕಿ.ಮೀ. ಇತ್ತು ಮತ್ತು ಉಡಾವಣೆ ತೀವ್ರತೆ ಗರಿಷ್ಠ 50 ಕಿ.ಮೀ. ಇತ್ತು. ಮಿಲಿಟರಿ ಸಂಬಂಧಿತ ಚಲನೆಯನ್ನು ಮೇಲ್ವಿಚಾರಣೆ ನಡೆಸಿ ಸಂಪೂರ್ಣವಾಗಿ ಉಡಾವಣೆ ಮಾಡುವ ಸಂದರ್ಭದಲ್ಲಿ ಇದು ಘಟಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಕೊರಿಯನ್ ಪರ್ಯಾಯ ದ್ವೀಪದಲ್ಲಿ ಮಿಲಿಟರಿ ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ 2018ರಲ್ಲಿ ಉತ್ತರ ಕೊರಿಯಾದೊಂದಿಗೆ ಮಾಡಿಕೊಂಡ ಒಪ್ಪಂದಗಳನ್ನು ಈ ಉಡಾವಣೆಗಳು ಉಲ್ಲಂಘಿಸಿವೆ ಎಂದು ಅದು ಹೇಳಿದೆ.

ಫೆಬ್ರವರಿ 28ರಂದು ಹನೋಯಿಯಲ್ಲಿ ನಡೆದ ಕಿಮ್ಸ್ ಶೃಂಗಸಭೆಯ ಒಂದನೇ ವಾರ್ಷಿಕೋತ್ಸವದಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆ ಸೇನೆಗೆ ಸಂಬಂಧಿಸಿದ ಚರ್ಚೆ ನಡೆಸಲಾಯಿತು ಎಂದು ಉತ್ತರ ಕೊರಿಯಾ ತಿಳಿಸಿದೆ. ಪೂರ್ವ ಕರಾವಳಿ ನಗರವಾದ ವೊನ್ಸಾನ್ ಬಳಿಯ ಪ್ರದೇಶದಿಂದ ಪಯೋಂಗ್ಯಾಂಗ್ ಎರಡು ಅಪರಿಚಿತ ಅಲ್ಪ-ಶ್ರೇಣಿಯ ಸ್ಪೋಟಕಗಳನ್ನು ಹಾರಿಸಿದಾಗ ಇದು ಮುಂದುವರೆಯಿತು.

ಈ ಉಡಾವಣೆಯು ಅನಿರೀಕ್ಷಿತವಾದುದಲ್ಲ ಹಾಗೂ ಪರಿಸ್ಥಿತಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಲಾಗುವುದು ಮತ್ತು ದಕ್ಷಿಣ ಕೊರಿಯಾ ಹಾಗೂ ಜಪಾನ್ ಜೊತೆ ನಿಕಟವಾಗಿ ಸಮಾಲೋಚಿಸಲಾಗುವುದು ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ. ಆದಾಗ್ಯೂ ಪ್ರಚೋದನೆಗಳನ್ನು ತಪ್ಪಿಸುವಂತೆ, ಯುಎನ್ ಸೆಕ್ಯುರಿಟಿ ಕೌನ್ಸಿಲ್ ಕಟ್ಟುಪಾಡುಗಳಿಗೆ ಬದ್ಧರಾಗಿರುವಂತೆ ಮತ್ತು ಸಂಪೂರ್ಣ ಅಣ್ವಸ್ತ್ರೀಕರಣ ಸಾಧನೆಗಾಗಿ ಸಬ್ಸ್ಟಾಂಟಿವ್ ಜೊತೆ ನಿರಂತರವಾಗಿ ಮಾತುಕತೆ ನಡೆಸುವಂತೆ ಅಮೇರಿಕಾವು ಉತ್ತರ ಕೊರಿಯಾಕ್ಕೆ ಕರೆ ನೀಡಿದೆ‌.

ಉತ್ತರ ಕೊರಿಯಾವು ‘ಬ್ಯಾಲಿಸ್ಟಿಕ್ ಕ್ಷಿಪಣಿಗಳು’ ಎಂದು ಕರೆಯಲಾಗುತ್ತಿದ್ದವನ್ನು ಉಡಾಯಿಸಿದೆ ಎಂದು ಜಪಾನ್ ಹೇಳಿದೆ‌‌. ಆದರೆ ಅವು ಜಪಾನಿನ ಭೂಪ್ರದೇಶ ಅಥವಾ ವಿಶೇಷ ಆರ್ಥಿಕ ವಲಯಕ್ಕೆ (ಇಇ ಝಡ್) ಯಾವುದೇ ಅತಿಕ್ರಮಣಕ್ಕೆ ಕಾರಣವಾಗಿರಲಿಲ್ಲ. ಈ ಕ್ರಮಗಳು ಜಪಾನ್ ಮತ್ತು ಪ್ರದೇಶದ ಶಾಂತಿ ಮತ್ತು ಸುರಕ್ಷತೆಗೆ ಧಕ್ಕೆ ತಂದಿದೆ.

ಇದೇ ರೀತಿಯ ಚಟುವಟಿಕೆಗಳಲ್ಲಿ ತೊಡಗಿದ್ದ ಉತ್ತರ ಕೊರಿಯಾದಿಂದ ಸುಮಾರು ಎರಡು ತಿಂಗಳ ವಿರಾಮದ ಬಳಿಕ ಇತ್ತೀಚಿನ ಉಡಾವಣೆಗಳು ಆಗಿವೆ. ಅಮೆರಿಕದೊಂದಿಗೆ ಮಾತುಕತೆ ಸ್ಥಗಿತಗೊಂಡ ಮಧ್ಯೆ 2019ರಲ್ಲಿ ದೇಶವು 13 ಬಾರಿ ಪರೀಕ್ಷಾ-ಹಾರಿಸಿದ ಕ್ಷಿಪಣಿಗಳನ್ನು ಹೊಂದಿತ್ತು. ಟ್ರಂಪ್ ಆಡಳಿತಕ್ಕೆ ವಿಶೇಷವಾಗಿ ಚಿಂತೆ ಮಾಡುತ್ತಿರುವ ಖಂಡಾಂತರ-ಶ್ರೇಣಿಯ ಕ್ಷಿಪಣಿಗಳನ್ನು ಹಾರಿಸುವುದರಿಂದ ಪಯೋಂಗ್ಯಾಂಗ್ ದೂರವಿರುತ್ತದೆ. ಅಧ್ಯಕ್ಷ ಟ್ರಂಪ್ ಅವರು 2019ರ ಉಡಾವಣೆಯನ್ನು “ಅತ್ಯಂತ ಪ್ರಮಾಣಿತ” ಎಂದು ಕರೆದಿದ್ದರು ಮತ್ತು ಅವರು ಯುಎಸ್ ಮುಖ್ಯ ಭೂಮಿಗೆ ಯಾವುದೇ ನೇರ ಬೆದರಿಕೆಯನ್ನು ಒಡ್ಡಲಿಲ್ಲ ಎಂದು ಹೇಳಿದ್ದಾರೆ. ಆದಾಗ್ಯೂ, ಶಸ್ತ್ರಾಸ್ತ್ರಗಳು ದಕ್ಷಿಣ ಕೊರಿಯಾಕ್ಕೆ ಸಾಕಷ್ಟು ಅಪಾಯವನ್ನುಂಟುಮಾಡುತ್ತವೆ ಮತ್ತು ಸುಮಾರು 28,000 ಅಮೆರಿಕಾದ ಸೈನಿಕರು ಅಲ್ಲೇ ಬಿಡಾರಹೂಡಿದ್ದಾರೆ.

ಸ್ಥಗಿತಗೊಂಡ ಅಣ್ವಸ್ತ್ರೀಕರಣ ಮಾತುಕತೆಗಳನ್ನು ಪ್ರಾರಂಭಿಸಲು ವಾಷಿಂಗ್ಟನ್‌ಗೆ ಆ ವರ್ಷದ ಕೊನೆಯವರೆಗೂ ಅವಕಾಶ ಇತ್ತು ಎಂದು ಕಿಮ್ 2019ರಲ್ಲಿ ಯುಎಸ್‌ಗೆ ಎಚ್ಚರಿಕೆ ನೀಡಿದ್ದರು. ವಾಷಿಂಗ್ಟನ್‌ನಿಂದ ಯಾವುದೇ ಚಲನೆ ನೀಡದೆ ಆ ಗಡುವು ಬಂದು ಹೋದಾಗ, ಕಿಮ್ ಹೊಸ ವರ್ಷದ ಸಂದೇಶದಲ್ಲಿ ತನ್ನ ದೇಶವು ತನ್ನ ಪರಮಾಣು ನಿರೋಧಕವನ್ನು ಹೆಚ್ಚಿಸುತ್ತದೆ ಮತ್ತು ಪ್ರಮುಖ ಶಸ್ತ್ರಾಸ್ತ್ರಗಳ ಪರೀಕ್ಷೆಯಲ್ಲಿ ಸ್ವಯಂ-ಹೇರಿದ ನಿಷೇಧವನ್ನು ಇನ್ನು ಮುಂದೆ ಇರಿಸಲಾಗುವುದಿಲ್ಲ ಎಂದು ಘೋಷಿಸಿದರು. ಕಿಮ್ ಮುಂದಿನ ದಿನಗಳಲ್ಲಿ “ಹೊಸ ಕಾರ್ಯತಂತ್ರದ ಆಯುಧ”ವನ್ನು ಪ್ರದರ್ಶಿಸುವುದಾಗಿ ವಾಗ್ದಾನ ಮಾಡಿದರು. “ಕಾರ್ಯತಂತ್ರದ ಆಯುಧ”ದ ಮುಂದುವರಿದ ಪ್ರಕಾರವೇ ಖಂಡಾಂತರ ಕ್ಷಿಪಣಿ ಅಥವಾ ಜಲಾಂತರ್ಗಾಮಿ-ಉಡಾವಣೆಯ ಬ್ಯಾಲಿಸ್ಟಿಕ್ ಕ್ಷಿಪಣಿ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ ಇತ್ತೀಚಿನ ಪರೀಕ್ಷೆಗಳು ಭರವಸೆಯ “ಕಾರ್ಯತಂತ್ರದ ಆಯುಧ”ದ ವರ್ಗಕ್ಕೆ ಹೊಂದಿಕೆಯಾಗುವುದಿಲ್ಲ.

ಉತ್ತರ ಕೊರಿಯಾದ ಮಿಲಿಟರಿ ನಡೆಯ ಸಮಯವನ್ನು ದೇಶ ಮತ್ತು ವಿದೇಶಗಳಲ್ಲಿ ಗರಿಷ್ಠ ರಾಜಕೀಯ ಪ್ರಭಾವ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಲಾಗಿದೆ. ಬಾಹ್ಯ ಬೆದರಿಕೆಗಳನ್ನು ಎದುರಿಸುವ ಬಗ್ಗೆ ದೇಶವಾಸಿಗಳಿಗೆ ಕಿಮ್  ಸ್ಪೂರ್ತಿ ತುಂಬಿದ್ದಾರೆ. ಇದನ್ನೂ ಮೀರಿ ಪಯೋಂಗ್ಯಾಂಗ್‌ ಉಡಾವಣೆಗಳನ್ನು ಜಾಗತಿಕ ರೇಡಾರ್‌ಗೆ ಹಿಂತಿರುಗಿಸುವ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ.

ಪ್ರಸ್ತುತ, ದಕ್ಷಿಣ ಕೊರಿಯಾ, ಜಪಾನ್ ಮತ್ತು ಅಮೇರಿಕಾ ಏಕಾಏಕಿ ಬಂದೆರಗಿದ ಮಾರಣಾಂತಿಕ ಕರೋನವೈರಸ್ ನಿಭಾಯಿಸುವಲ್ಲಿ ನಿರತವಾಗಿವೆ. ಬಳಿಕ ಉತ್ತರ ಕೊರಿಯಾದ ಷೆನಾನಿಗನ್‌ಗಳತ್ತ ಗಮನಹರಿಸುವ ಸಾಧ್ಯತೆ ಇದೆ.

ಯುಎಸ್ಎ, ದಕ್ಷಿಣ ಕೊರಿಯಾ ಮತ್ತು ಜಪಾನ್ ಮೇಲೆ ಉಡಾವಣೆ ನಡೆಸಿರುವುದರಿಂದ ಉತ್ತರ ಕೊರಿಯಾ  ವಿರುದ್ಧ ವ್ಯಾಪಕವಾದ ನಿರ್ಬಂಧಗಳನ್ನು ತೆಗೆದುಹಾಕಲು ಒತ್ತಡ ಹೇರಹುದು. ಚುನಾವಣಾ ಸ್ಪರ್ಧೆಯ‌ ನಡುವೆಯೇ  ಟ್ರಂಪ್ ಕೆಲವು ರಿಯಾಯಿತಿ ನೀಡಬಹುದೆಂದು ಪಯೋಂಗ್ಯಾಂಗ್ ಆಶಿಸಿದೆ‌. ಉತ್ತರ ಕೊರಿಯಾ ಇನ್ನೂ ಮುಂದೆ ಸಾಗುವುದಿಲ್ಲ ಮತ್ತು ಇನ್ನಷ್ಟು ಪ್ರಚೋದನಕಾರಿ ಉಲ್ಲಂಘನೆ ಮಾಡುವುದಿಲ್ಲ ಎಂದು ನಿರೀಕ್ಷೆ ಮಾಡಬಹುದು.

ಸ್ಥಿರ, ಸುರಕ್ಷಿತ ಮತ್ತು ಶಾಂತಿಯುತ ಕೊರಿಯನ್ ಪರ್ಯಾಯ ದ್ವೀಪ ಮತ್ತು ಜಪಾನ್ ಸಮುದ್ರದಲ್ಲಿನ ಕಡಲ ಪ್ರದೇಶವು ಭಾರತದ ಕಾರ್ಯತಂತ್ರದ ಹಿತಾಸಕ್ತಿಗಳಲ್ಲಿದೆ. ಕಳೆದ ಕೆಲ ವರ್ಷಗಳಿಂದ ಸ್ಥಿರವಾಗಿ ಪ್ರಗತಿ ಸಾಧಿಸುತ್ತಿರುವ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಸುಗಮ ಮತ್ತು ತಡೆರಹಿತ ಪ್ರಗತಿಗೆ ಇದು ಉದಾಹರಣೆಯಾಗಿದೆ.

ಸ್ಕ್ರಿಪ್ಟ್: ಅಶೋಕ್ ಸಜ್ಜನ್ಹಾರ್, ಮಾಜಿ ಭಾರತೀಯ ರಾಜತಾಂತ್ರಿಕ ಮತ್ತು ಜಾಗತಿಕ ಅಧ್ಯಯನ ಸಂಸ್ಥೆ ಅಧ್ಯಕ್ಷ